ಬಿ.ಎಂ. ಗಿರಿರಾಜ್ ನಿರ್ದೇಶನದ, ಗುರು ದೇಶಪಾಂಡೆ ನಿರ್ಮಾಣ ಮಾಡುತ್ತಿರುವ ‘ರಾಮರಸ’ ಚಿತ್ರದಲ್ಲಿ ‘ಇಂದ್ರ’ನಾಗಿ ನಟ ಶರಣ್ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದಲ್ಲಿ ನಾಯಕನಾಗಿ ಕಾರ್ತಿಕ್ ಮಹೇಶ್ ನಟಿಸುತ್ತಿದ್ದು, ‘ಅಧ್ಯಕ್ಷ’ ಖ್ಯಾತಿಯ ಹೆಬಾ ಪಟೇಲ್ ನಾಯಕಿಯಾಗಿದ್ದಾರೆ. ‘ಹಾಸ್ಯನಟನಾಗಿ ನಟನೆಯ ವೃತ್ತಿ ಆರಂಭಿಸಿದ ಶರಣ್ ಹೀರೊ ಆಗಿ ತಮ್ಮದೇ ಆದ ಹಾಸ್ಯತನವನ್ನು ಎಲ್ಲ ಚಿತ್ರಗಳಲ್ಲಿಯೂ ಉಣಬಡಿಸಿದ್ದಾರೆ. ‘ರಾಮರಸ’ ಚಿತ್ರದಲ್ಲಿ ದೇವಾನು ದೇವತೆಗಳ ಅಧಿಪತಿ, ಹೋಮ- ಹವನ ಮತ್ತು ಯಜ್ಞಗಳ ಒಡೆಯ ಇಂದ್ರ ದೇವೇಂದ್ರನಾಗಿ ಕಾಣಿಸಿಕೊಂಡಿದ್ದಾರೆ. ‘ರಾಮರಸ’ ಚಿತ್ರದಲ್ಲಿ ಒಂದು ಬಹುಮುಖ್ಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು’ ಎಂದು ಚಿತ್ರತಂಡ ತಿಳಿಸಿದೆ. ಹಾರರ್ ಕಾಮಿಡಿ ಜಾನರ್ನ ಈ ಚಿತ್ರದಲ್ಲಿ ಬಾಲಾಜಿ ಮನೋಹರ್ ಅವರೂ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.