ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಲಿವುಡ್‌ | ‘ಅಂಧಾದುನ್’ ರಿಮೇಕ್‌ನಲ್ಲಿ ರಮ್ಯಾ ನಟನೆ

Last Updated 9 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

‘ಅಂಧಾದುನ್’ –ಎರಡು ವರ್ಷದ ಹಿಂದೆ ತೆರೆಕಂಡ ಬಾಲಿವುಡ್‌ನ ಸೂಪರ್‌ ಹಿಟ್‌ ಚಿತ್ರ. ಶ್ರೀರಾಮ್‌ ರಾಘವನ್‌ ನಿರ್ದೇಶಿಸಿದ್ದ ಈ ಕ್ರೈಮ್, ಥ್ರಿಲ್ಲರ್‌ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ ಅವರ ನಟನೆ ಪ್ರೇಕ್ಷಕರ ಭಾವವನ್ನು ಮೀಟಿತ್ತು.

ಯುವಕನೊಬ್ಬ ಅಂಧನಂತೆ ನಟಿಸುತ್ತಿರುತ್ತಾನೆ. ಕೊನೆಗೆ ತನ್ನ ಸುತ್ತಲೂ ಘಟಿಸುವ ಅಪರಾಧ ಕೃತ್ಯಗಳಿಗೆ ಸಾಕ್ಷಿಯಾಗುತ್ತಲೇ ತಾನೂ ಆ ಷಡ್ಯಂತ್ರದ ಸುಳಿಗೆ ಸಿಲುಕುವುದೇ ಈ ಚಿತ್ರದ ತಿರುಳು. ಆಯುಷ್ಮಾನ್‌ ಅಂಧನಾಗಿ ನಟಿಸಿದ್ದರು. ಇದರಲ್ಲಿ ಹಿರಿಯ ನಟಿ ಟಬು ಅವರೂ ಮುಖ್ಯಪಾತ್ರಕ್ಕೆ ಬಣ್ಣ ಹಚ್ಚಿದ್ದರು.

ಈಗ ತೆಲುಗಿನಲ್ಲಿ ‘ಅಂಧಾದುನ್’ ರಿಮೇಕ್‌ ಆಗುತ್ತಿದೆ. ನಟ ನಿತಿನ್‌ ಅವರ ಸ್ವಂತ ಬ್ಯಾನರ್‌ನಲ್ಲಿಯೇ ಇದು ಸೆಟ್ಟೇರುತ್ತಿದೆ. ಹಿಂದಿಯಲ್ಲಿ ಆಯುಷ್ಮಾನ್‌ ಖುರಾನಾ ನಿರ್ವಹಿಸಿದ್ದ ಪಾತ್ರವನ್ನು ನಿತಿನ್‌ ಅವರೇ ನಿಭಾಯಿಸಲಿದ್ದಾರೆ. ಹಾಗಿದ್ದರೆ ಟಬು ಪಾತ್ರದಲ್ಲಿ ಯಾರು ನಟಿಸುತ್ತಾರೆ ಎಂಬ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ.

‘ಕ್ವೀನ್’ ವೆಬ್‌ ಸರಣಿ ಮೂಲಕ ಗಮನ ಸೆಳೆದಿರುವ ರಮ್ಯಾ ಕೃಷ್ಣ ಅವರೇ ಆ ಬೋಲ್ಡ್‌ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಟಾಲಿವುಡ್‌ ಪಡಸಾಲೆಯಿಂದ ಕೇಳಿಬರುತ್ತಿದೆ. ಈಗಾಗಲೇ, ಚಿತ್ರತಂಡ ಅವರೊಟ್ಟಿಗೆ ಮಾತುಕತೆಯನ್ನೂ ನಡೆಸಿದೆಯಂತೆ.

ಪ್ರಸ್ತುತ ರಮ್ಯಾ ಕೃಷ್ಣ ಅವರು ಪುರಿ ಜಗನ್ನಾಥ್‌ ನಿರ್ದೇಶನದ ವಿಜಯ್‌ ದೇವರಕೊಂಡ ನಟನೆಯ ‘ಪೈಟರ್‌’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಮಯ ಹೊಂದಾಣಿಕೆ ಮಾಡಿಕೊಂಡು ‘ಅಂಧಾದುನ್’ ರಿಮೇಕ್‌ನಲ್ಲಿಯೂ ಅವರು ನಟಿಸಲಿದ್ದಾರೆ ಎಂಬುದು ಚಿತ್ರತಂಡದ ವಿಶ್ವಾಸ. ಮೆರ್ಲಪಾಕ ಗಾಂಧಿ ಅವರು ಈ ರಿಮೇಕ್‌ ಚಿತ್ರಕ್ಕೆ ಆ್ಯಕ್ಷನ್ ಕಟ್‌ ಹೇಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT