ಬುಧವಾರ, ನವೆಂಬರ್ 13, 2019
21 °C

ಪುರಿ ಜಗನ್ನಾಥ್‌ ಚಿತ್ರದಲ್ಲಿ ರಮ್ಯಾಕೃಷ್ಣ

Published:
Updated:

‘ಬಾಹುಬಲಿ’ ಖ್ಯಾತಿಯ ನಟಿ ರಮ್ಯಾ ಕೃಷ್ಣ,  ಪುರಿ ಜಗನ್ನಾಥ ಅವರ ‘ರೊಮ್ಯಾಂಟಿಕ್‌’ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.

ಈ ಹೊಸ ಚಿತ್ರದಲ್ಲಿ ಆಕಾಶ್‌ ಪುರಿ ಹಾಗೂ ಕೇತಿಕಾ ಶರ್ಮಾ ಜೋಡಿಯಾಗಿ ನಟಿಸಲಿದ್ದು, ಅನಿಲ್‌ ಪಡುರಿ ಈ ನಿರ್ದೇಶನ ಮಾಡಲಿದ್ದಾರೆ.

ಹೈದರಾಬಾದ್‌ನಲ್ಲಿ ನಡೆಯುತ್ತಿರುವ ‘ರೊಮ್ಯಾಂಟಿಕ್‌’ ಸಿನಿಮಾದ ಚಿತ್ರೀಕರಣದಲ್ಲಿ ರಮ್ಯಾ ಸೇರಿಕೊಂಡಿದ್ದಾರೆ. ಈ ಚಿತ್ರಕ್ಕೆ ಸುನಿಲ್‌ ಕಶ್ಯಪ್‌ ಸಂಗೀತ ಸಂಯೋಜನೆ ಮಾಡಲಿದ್ದಾರೆ. ನಾಗೇಶ್‌ ಕ್ಯಾಮೆರಾ ಕೆಲಸ ಮಾಡಲಿದ್ದಾರೆ.

‘ಇಸ್ಮಾರ್ಟ್‌ ಶಂಕರ್‌’ ಚಿತ್ರದ ಭಾರಿ ಯಶಸ್ಸಿನ ನಂತರ ಪುರಿ ಜಗನ್ನಾಥ್‌  ‘ರೊಮ್ಯಾಂಟಿಕ್‌’ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಬಂಡವಾಳ ಹೂಡುವುದರ ಜೊತೆಗೆ ಈ ಚಿತ್ರದ ಕತೆ, ಸ್ಕ್ರೀನ್‌ ಪ್ಲೇ, ಸಂಭಾಷಣೆಯೂ ಪುರಿ ಜಗನ್ನಾಥ್‌ ಅವರದು. ಸಂಕಲನವನ್ನು ಜುನೈದ್‌ ಸಿದ್ದಿಕಿ ವಹಿಸಿಕೊಂಡಿದ್ದು, ಪ್ರಮುಖ ಪಾತ್ರಗಳಲ್ಲಿ ಉತ್ತೇಜ್‌, ಮಕರಂದ ದೇಶಪಾಂಡೆ ಹಾಗೂ ಸನೈನಾ ನಟಿಸಲಿದ್ದಾರೆ.

ಇದನ್ನೂ ಓದಿ: 15 ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ಗೆ ನಿರ್ದೇಶಕ ಪುರಿ ಜಗನ್ನಾಥ್‌

ಇದಲ್ಲದೇ ವಿಜಯ್‌ ದೇವರಕೊಂಡ ಅಭಿನಯದ ‘ಫೈಟರ್‌’ ಚಿತ್ರವನ್ನು ಪುರಿ ಜಗನ್ನಾಥ್‌ ನಿರ್ದೇಶನ ಮಾಡುತ್ತಿದ್ದಾರೆ.

ಪ್ರತಿಕ್ರಿಯಿಸಿ (+)