ಶನಿವಾರ, ಜುಲೈ 31, 2021
28 °C

ಲಾಕ್‌ಡೌನ್‌ ಬಳಿಕ ‘ಕ್ವೀನ್‌ 2’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಖ್ಯಾತ ನಿರ್ದೇಶಕ ಗೌತಮ್‌ ಮೆನನ್‌ ಹಾಗೂ ಪ್ರಶಾಂತ್ ಮುರುಗೇಶನ್‌ ನಿರ್ದೇಶನದ ‘ಕ್ವೀನ್‌’ ವೆಬ್‌ ಸಿರೀಸ್‌ ಭಾರಿ ಜನಪ್ರಿಯವಾಗಿತ್ತು. ಈಗ ಈ ಸರಣಿಯ ಸೆಕೆಂಡ್‌ ಸೀಸನ್‌ ‘ಕ್ವೀನ್‌ 2’ಗೆ ನಟಿ ರಮ್ಯಾಕೃಷ್ಣ ಸಿದ್ಧತೆ ನಡೆಸುತ್ತಿದ್ದಾರೆ.

‘ಕ್ವೀನ್‌’ ಸರಣಿಯು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನ ಕತೆ ಆಧಾರಿತ ಎಂಬ ಸುದ್ದಿಯೇ ಈ ವೆಬ್‌ಸರಣಿ ಬಗ್ಗೆ ಕುತೂಹಲ ಹುಟ್ಟುಹಾಕಿತ್ತು. 

ಕೆಂಪು ಅಂಚಿನ, ಬಿಳಿ ಸೀರೆ ತೊಟ್ಟು ಕೈಕಟ್ಟಿ ನಿಂತುಕೊಂಡು, ಜಯಲಲಿತಾ ರೀತಿಯಲ್ಲಿ ರಮ್ಯಾಕೃಷ್ಣ ಪೋಸ್‌ ನೀಡಿರುವ ಸರಣಿಯ ಫಸ್ಟ್‌ ಲುಕ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಸಿನಿಮಾ ನಾಯಕಿಯೊಬ್ಬರು ರಾಜಕಾರಣಿಯಾಗಿ ಬೆಳೆಯುವ ಕತೆಯನ್ನು ಕಟ್ಟಿಕೊಡಲಾಗಿದೆ.

‘ಇದು ಜಯಲಲಿತಾ ಅವರ ಜೀವನಕತೆಯಲ್ಲ, ಅವರ ಜೀವನದದಿಂದ ಸ್ಫೂರ್ತಿ ಪಡೆದು ಈ ಸರಣಿ ನಿರ್ಮಿಸಲಾಗಿದೆ ಎಂದು ರಮ್ಯಾಕೃಷ್ಣ ಸೇರಿದಂತೆ ವೆಬ್‌ಸರಣಿ ನಿರ್ಮಾಣ ತಂಡ ಹೇಳಿಕೊಂಡಿತ್ತು. ಇದರಲ್ಲಿ ಮಹಾತ್ವಾಕಾಂಕ್ಷೆಯುಳ್ಳ ಮಹಿಳೆಯ ಬಾಲ್ಯ, ಸಿನಿಮಾ ಕ್ಷೇತ್ರಕ್ಕೆ ಪ್ರವೇಶ ಹಾಗೂ ರಾಜಕೀಯ ಜೀವನದ ಸುತ್ತ ಕತೆ ಹಣೆಯಲಾಗಿತ್ತು.

‘ಕ್ವೀನ್‌’ ಅನಿತಾ ಶಿವಕುಮಾರ್‌ ಬರೆದಿರುವ ಕೃತಿ ಆಧಾರಿತ ಸರಣಿಗೂ, ಜಯಲಲಿತಾ ಜೀವನಕ್ಕೆ ಸಾಮ್ಯತೆಗಳಿವೆ. ಹಾಗಾಗಿ ನನಗೂ ಆ ವೆಬ್‌ಸರಣಿಯನ್ನು ತುಂಬಾ ಇಷ್ಟ. ಜಯಲಲಿತಾ ಅವರ ಧೈರ್ಯ, ಸಾಧನೆಯು ನನಗಿಷ್ಟ. ಅವರು ನಿಜವಾದ ರಾಣಿ’ ಎಂದು ರಮ್ಯಾಕೃಷ್ಣ ಪ್ರಶಂಸಿದ್ದಾರೆ. 

‘ಕ್ವೀನ್’‌ ಜನಪ್ರಿಯಗೊಂಡ ಬೆನ್ನಲ್ಲೇ ಈಗ ಕ್ವೀನ್‌ 2 ಕೆಲಸಗಳು ಆರಂಭವಾಗಿವೆ.ಲಾಕ್‌ಡೌನ್‌ ತೆರವಾದ ನಂತರ ಚಿತ್ರೀಕರಣ ಆರಂಭವಾಗಲಿದೆ.

 ‘ಕ್ವೀನ್‌ 2‌ ಆರಂಭಿಸುವ ಕುರಿತು ಸ್ಪಷ್ಟವಾಗಿ ಏನೂ ಗೊತ್ತಿಲ್ಲ. ಬರಹಗಾರ್ತಿ ರೇಷ್ಮಾ ಚಿತ್ರಕತೆ ಸಿದ್ಧಪಡಿಸುತ್ತಿದ್ದಾರೆ. ವೆಬ್‌ಸರಣಿ ಸೆಟ್ಟೇರಲು ಎಲ್ಲಾ ಸಿದ್ಧತೆ ನಡೆದಿದೆ. ಚಿತ್ರೀಕರಣ ಆರಂಭವಾಗುವುದನ್ನೇ ಎದುರು ನೋಡುತ್ತಿದ್ದೇನೆ. ಜನರು ಹೆಚ್ಚು ಆ್ಯಕ್ಷನ್‌, ಆಸಕ್ತಿಕರ ಕತೆಯನ್ನು ಬಯಸುತ್ತಿದ್ದಾರೆ. ಕ್ವೀನ್‌ 2 ಥ್ರಿಲ್ಲಿಂಗ್‌ ಹಾಗೂ ಕುತೂಹಲ ಕೆರಳಿಸುವ ಕತೆ ಹೊಂದಿದೆ’ ಎಂದು ಚಿತ್ರದ ಬಗೆಗಿನ ನಿರೀಕ್ಷೆಯನ್ನು ಅವರು ಹೆಚ್ಚಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು