ಸುಳ್ಳು ಸುದ್ದಿ: ರಾನಾ ದಗ್ಗುಬಾಟಿ ಕಿಡಿ

ಆರೋಗ್ಯ ಹದಗೆಟ್ಟಿದ್ದು, ಮೂತ್ರಪಿಂಡ ಕಸಿ ಮಾಡಲಾಗಿದೆ ಎಂಬ ಸುದ್ದಿಯನ್ನು ನಟ ರಾನಾ ದಗ್ಗುಬಾಟಿ ನಿರಾಕರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ರಾನಾ ಕಿಡ್ನಿವೈಫಲ್ಯದಿಂದ ಬಳಲುತ್ತಿದ್ದು, ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸುದ್ದಿಯನ್ನು ಇದೆಲ್ಲಾ ರಬ್ಬಿಶ್ ಎಂದು ಅವರು ಕಿಡಿ ಕಾರಿದ್ದಾರೆ. ‘ನಾನು ಸದ್ಯ ಅಮೆರಿಕದಲ್ಲಿ ಇದ್ದೇನೆ. ನನ್ನ ಮುಂದಿನ ಸಿನಿಮಾ ತಯಾರಿಗಾಗಿ ಬಂದಿದ್ದೇನೆ. ನನ್ನ ಮುಂದಿನ ಚಿತ್ರದ ವಿಷುವಲ್ ಎಫೆಕ್ಟ್, ಗ್ರಾಫಿಕ್ಸ್ ಮಾತುಕತೆಗಾಗಿ ಇಲ್ಲಿನ ಕಂಪೆನಿಗಳ ಜೊತೆ ಮಾತುಕತೆಗಾಗಿ ಬಂದಿದ್ದೇನೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಿಡ್ನಿ ಸಮಸ್ಯೆಯಿಂದ ರಾನಾ ಬಳಲುತ್ತಿರುವುದರಿಂದ ಅವರು ತೂಕ ಕಳೆದುಕೊಂಡಿದ್ದಾರೆ. ಆರೋಗ್ಯ ಹದಗೆಟ್ಟಿದ್ದರಿಂದಾಗಿ ಅವರಿಗೆ ತಕ್ಷಣ ಮೂತ್ರಪಿಂಡ ಕಸಿ ಅಗತ್ಯವಿತ್ತು. ಇದೀಗ ರಾಣಾ ಅವರಿಗೆ ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸೆಯು ಯಶಸ್ವಿಯಾಗಿದೆ. ರಾಣಾ ಅವರ ತಾಯಿಯೇ ಮೂತ್ರಪಿಂಡವನ್ನು ದಾನ ಮಾಡಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ ಎಂದೆಲ್ಲ ಸುದ್ದಿಗಳು ಹರಿದಾಡುತ್ತಿದ್ದವು.
ಬಾಲಿವುಡ್‌ನಲ್ಲಿ ಹೌಸ್‌ಫುಲ್ 4 ಹಾಗೂ ಹಾಥಿ ಮೇರೆ ಸಾಥಿ ಭುಜ್– ದ ಪ್ರೈಡ್ ಆಫ್ ಇಂಡಿಯಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ವಿರಾಟಪರ್ವಂನಲ್ಲಿ ನಟಿಸುತ್ತಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.