ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಯಲ್ಲಿ ಬಿದ್ದಾಗ ನೀರು ಸಹ ಶರಬತ್ತಿನಂತೆ ಎಂದಿದ್ದ ರಣಬೀರ್ ಕಪೂರ್

Last Updated 12 ಏಪ್ರಿಲ್ 2022, 7:49 IST
ಅಕ್ಷರ ಗಾತ್ರ

ಬಾಲಿವುಡ್‌ನ ತಾರಾ ಜೋಡಿ ಆಲಿಯಾ ಭಟ್‌ ಮತ್ತು ರಣಬೀರ್ ಕಪೂರ್ ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ಕೆಲವು ವರ್ಷಗಳಿಂದ ಡೇಟಿಂಗ್‌ ಮಾಡುತ್ತಿರುವ ಈ ಜೋಡಿ, 2018ರಲ್ಲೇ ಪ್ರೀತಿಯಲ್ಲಿ ಬಿದ್ದಿತ್ತಾ?

2018ರಲ್ಲಿ ಲೇಖಕಿ, ಪತ್ರಕರ್ತೆ ಅನುಪಮ್ ಚೋಪ್ರಾ ಅವರಿಗೆ ನೀಡಿದ್ದ ಸಂದರ್ಶನದಲ್ಲಿ ರಣಬೀರ್ ಕಪೂರ್ ಆಡಿದ್ದ ಮಾತುಗಳು ಈ ಪ್ರಶ್ನೆಗೆ ಉತ್ತರ ನೀಡಿವೆ.

‘ಪ್ರೀತಿಯ ಬಲೆಯಲ್ಲಿ ಸಿಲುಕುವುದೆಂದರೆ ಜಗತ್ತಿನಲ್ಲಿಯೇ ಅದ್ಭುತವಾದ ವಿಚಾರ. ವಿಶಿಷ್ಟ ಅನುಭವ. ನೀವು ಪ್ರೀತಿಯಲ್ಲಿ ಬಿದ್ದಾಗ ಎಲ್ಲವೂ ಚೆನ್ನಾಗಿಯೇ ಕಾಣಿಸುತ್ತವೆ. ನೀರು ಸಹ ಶರಬತ್ತಿನ ರುಚಿ ಹೊಂದಿರುತ್ತದೆ’ ಎಂದು ರಣಬೀರ್ ಹೇಳಿದ್ದರು.

ಅಂದಹಾಗೆ, ಈ ಸಂದರ್ಶನ ನೀಡುವುದಕ್ಕೂ ಕೆಲವು ತಿಂಗಳುಗಳ ಮೊದಲಷ್ಟೇ ಅವರು ಆಲಿಯಾ ಜತೆ ‘ಬ್ರಹ್ಮಾಸ್ತ್ರ’ ಸಿನಿಮಾದ ಶೂಟಿಂಗ್‌ನಲ್ಲಿ ತೊಡಗಿದ್ದರು.

ಈ ಜೋಡಿಯ ವಿವಾಹಕ್ಕೆ ಎರಡೂ ಕುಟುಂಬದ ಹಿರಿಯರು ಒಪ್ಪಿಗೆ ಸೂಚಿಸಿದ್ದಾರೆ. ಏ.13ರಂದು ಮೆಹಂದಿ ಶಾಸ್ತ್ರ ನಡೆಯಲಿದೆ. ಏ.15ರಂದು ಅದ್ದೂರಿಯಾಗಿ ಮದುವೆ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಎರಡೂ ಕುಟುಂಬಗಳ ಆಪ್ತರು ಮತ್ತು ಸ್ನೇಹಿತರಷ್ಟೇ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT