ಸೋಮವಾರ, ಆಗಸ್ಟ್ 8, 2022
23 °C

ರಂಗ್‌‌ದೇ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ: ₹40 ಕೋಟಿ ಮೊತ್ತಕ್ಕೆ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಥಿಯೇಟರ್‌ಗಳ ಪುನಾರಂಭದ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲದ ಕಾರಣ ನಿರ್ಮಾಪಕರು ಸಿನಿಮಾ ಬಿಡುಗಡೆಗಾಗಿ ಡಿಜಿಟಲ್ ವೇದಿಕೆಗಳತ್ತ ಕಣ್ಣು ಹಾಯಿಸುತ್ತಿದ್ದಾರೆ. ಈಗಾಗಲೇ ಬಾಲಿವುಡ್ ಸೇರಿದಂತೆ ಎಲ್ಲಾ ಭಾಷೆಯ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಈಗ ಕೀರ್ತಿ ಸುರೇಶ್ ಹಾಗೂ ನಿತಿನ್‌ ನಟನೆಯ ತೆಲುಗಿನ ‘ರಂಗ್‌ದೇ’ ಸಿನಿಮಾ ಕೂಡ ಒಟಿಟಿಯಲ್ಲೇ ಬಿಡುಗಡೆಯಾಗುವ ಸಾಧ್ಯತೆ ಕಾಣುತ್ತಿದೆ.

ಮೂಲಗಳ ಪ್ರಕಾರ ಜೀ5 ಸಂಸ್ಥೆಯು ಸಿನಿಮಾದ ಸಂಪೂರ್ಣ ಹಕ್ಕನ್ನು ಖರೀದಿಸಲು ನಿರ್ಮಾಪಕರನ್ನು ಸಂಪರ್ಕಿಸಿದೆ ಎಂದು ಹೇಳಲಾಗುತ್ತಿದೆ. ನಿರ್ಮಾಪಕ ಸೂರ್ಯದೇವರ ನಾಗ ವಂಶಿ ಸಿನಿಮಾದ ಸಂಪೂರ್ಣ ಹಕ್ಕಿಗೆ ₹ 40 ಕೋಟಿ ಮೊತ್ತದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಜೀ5 ಸಂಸ್ಥೆ ಸಿನಿಮಾವನ್ನು ₹ 36 ಕೋಟಿಗೆ ಖರೀದಿ ಮಾಡುವ ಯೋಜನೆ ಹಾಕಿದ್ದು ಇದರಿಂದ ಇಬ್ಬರಿಗೂ ಲಾಭವಾಗಲಿದೆ. ಈ ಕುರಿತು ಇನ್ನಷ್ಟು ಮಾಹಿತಿ ಇನ್ನೇನು ಲಭ್ಯವಾಗಬೇಕಿದೆ.

‘ತೊಲಿ ಪ್ರೇಮ’ ಖ್ಯಾತಿ ನಿರ್ದೇಶಕ ವೆಂಕಿ ಅಲ್ಲುರಿ ‘ರಂಗ್‌ದೇ’ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪಿಸಿ ಶ್ರೀರಾಮ್ ಸಿನಿಮಾಟೋಗ್ರಫಿ ಕೆಲಸ ಮಾಡಿದ್ದು ದೇವಿಶ್ರೀ ಪ‍್ರಸಾದ್ ಸಂಗೀತ ನಿರ್ದೇಶನವಿದೆ. ಸದ್ಯದಲ್ಲೇ ಸಿನಿಮಾದ ಶೂಟಿಂಗ್ ಪುನಾರಂಭಗೊಳ್ಳಲಿದ್ದು ಸಿನಿಮಾದ ಸಂಪೂರ್ಣ ಕೆಲಸ ಮುಗಿದ ಬಳಿಕವಷ್ಟೇ ಡಿಜಿಟಲ್ ಬಿಡುಗಡೆಯತ್ತ ಮನಸ್ಸು ಮಾಡಲಿದ್ದಾರೆ ನಿರ್ಮಾಪಕರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು