ಅಲ್ಲು ಅರ್ಜುನ್ ಅವರ ಮುಂದಿನ ಚಿತ್ರ ‘ಐಕಾನ್’ನಲ್ಲಿ ನಾಯಕಿಯಾಗಿದೆಹಲಿ ಸುಂದರಿ ರಾಶಿ ಖನ್ನಾ ನಟಿಸುತ್ತಿದ್ದಾರೆ.

ಈ ಚಿತ್ರವನ್ನು ಶ್ರೀರಾಮ್ ವೇಣು ನಿರ್ದೇಶನ ಮಾಡುತ್ತಿದ್ದು, ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರವು ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ.

ರಾಶಿ ಖನ್ನಾ ಸದ್ಯ ‘ವೆಂಕಿ ಮಾಮ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಇದರಲ್ಲಿ ನಾಗಚೈತನ್ಯ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ದಗ್ಗುಬಾಟಿ ವೆಂಕಟೇಶ್ ಹಾಗೂ ಪಾಯಲ್ ರಜಪೂತ್ ಕೂಡ ನಟಿಸುತ್ತಿದ್ದಾರೆ.

ಇತ್ತೀಚೆಗೆ ರಾಶಿ ಖನ್ನಾ ತೆಲುಗು ಸಿನಿಮಾ ‘ಟೆಂಪರ್’ನ ತಮಿಳು ರಿಮೇಕ್ ‘ಅಯೋಗ್ಯ’ದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಅವರ ಅಭಿನಯಕ್ಕಾಗಿ ಪ್ರಶಂಸೆ ವ್ಯಕ್ತವಾಗಿತ್ತು. ಬಳಿಕ ಅವರು ಅಭಿನಯಿಸಿದ ‘ಶ್ರೀನಿವಾಸ ಕಲ್ಯಾಣಂ’ ಚಿತ್ರ ಬಾಕ್ಸಾಫೀಸಿನಲ್ಲಿ ಸೋಲು ಕಂಡಿತ್ತು.

ಈ ಚಿತ್ರವು ಪ್ರೇಮ ಕತೆ ಹೊಂದಿದೆ. ‘ರಾಶಿ ಖನ್ನಾ ಜೊತೆ ನಿರ್ಮಾಪಕ ದಿಲ್ ರಾಜು ಮಾತನಾಡಿದ್ದಾರೆ. ‘ಶ್ರೀನಿವಾಸ ಕಲ್ಯಾಣಂ ಚಿತ್ರವು ಈ ಬ್ಯಾನರ್ನಡಿಯೇ ನಿರ್ಮಾಣವಾಗಿದ್ದು, ರಾಶಿ ಖನ್ನಾ ಪಾತ್ರವನ್ನು ಚೆನ್ನಾಗಿ ನಿರ್ವಹಿಸುತ್ತಾರೆ. ಚಿತ್ರಕತೆ ಕೇಳಿ ನಟಿ ಸಂತಸ ವ್ಯಕ್ತಪಡಿಸಿ ನಟಿಸಲು ಒಪ್ಪಿಕೊಂಡಿದ್ದಾರೆ’ ಎಂದು ಚಿತ್ರದ ನಿರ್ಮಾಣ ತಂಡ ಹೇಳಿದೆ.

ಅಲ್ಲು ಅರ್ಜುನ್ ಜೊತೆ ಇದೇ ಮೊದಲ ಬಾರಿಗೆ ರಾಶಿ ನಟಿಸುತ್ತಿದ್ದಾರೆ. ಶ್ರೀರಾಮ್ ವೇಣು ನಿರ್ದೇಶನದ ‘ಓಹ್ ಮೈ ಫ್ರೆಂಡ್’ ಹಾಗೂ ‘ಮಿಡ್ಲ್ ಕ್ಲಾಸ್ ಅಬ್ಬಾಯಿ’ ಬಾಕ್ಸಾಫೀಸಿನಲ್ಲಿ ಹಿಟ್ ಆಗಿತ್ತು. ಹೀಗಾಗಿ ಈ ಚಿತ್ರದ ಬಗ್ಗೆಯೂ ನಿರೀಕ್ಷೆ ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.