ಶನಿವಾರ, ಜೂನ್ 19, 2021
27 °C

ರಿಲೇಷನ್‌ಶಿಪ್‌ ಗಾಸಿಪ್ ಬಗ್ಗೆ ತುಟಿ ಬಿಚ್ಚಿದ ರಾಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೆಲೆಬ್ರೆಟಿ ಎನ್ನಿಸಿಕೊಳ್ಳುವುದು ಸುಲಭದ ಮಾತಲ್ಲ. ಒಮ್ಮೆ ಹೆಸರು ಗಳಿಸಿ ಸೆಲೆಬ್ರೆಟಿ ಎನ್ನಿಸಿಕೊಂಡರೆ ಅವರ ಸುತ್ತ ಸದಾ ಗಾಸಿಪ್ ಸುದ್ದಿಗಳು ಹರಿದಾಡುತ್ತಿರುತ್ತವೆ. ಅನೇಕ ಬಾರಿ ಅಭಿಮಾನಿಗಳು ಹಾಗೂ ವಿಮರ್ಶಕರಿಂದ ಸಾಕಷ್ಟು ಟೀಕೆಗಳನ್ನೂ ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಆಧಾರರಹಿತ ಊಹಾಪೋಹಗಳಿಗೂ ಸಮರ್ಥನೆ ನೀಡಬೇಕಾಗುತ್ತದೆ.

ಅದರಲ್ಲೂ ಪ್ರೀತಿ–ಪ್ರೇಮದ ವಿಷಯದಲ್ಲಿ ಬೇಡವೆಂದರೂ ಸೆಲೆಬ್ರೆಟಿಗಳ ಸುತ್ತ ಊಹಾಪೋಹಗಳು ಹುಟ್ಟಿಕೊಳ್ಳುವುದು ಸಾಮಾನ್ಯ.

ಇತ್ತೀಚೆಗೆ ನಟಿ ರಾಶಿ ಖನ್ನಾ ವಿಷಯದಲ್ಲೂ ಹೀಗೆ ಆಗಿತ್ತು. ಆದರೆ ತನ್ನ ಪ್ರೇಮ ಪ್ರಕರಣದ ಗಾಸಿಪ್‌ ಬಗ್ಗೆ ಇಲ್ಲಿಯವರೆಗೆ ತುಟಿ ಬಿಚ್ಚದ ರಾಶಿ ಈಗ ಮಾತನ್ನಾಡಿದ್ದಾರೆ. ‘ನಾನು ಯಾರನ್ನೂ ಪ್ರೀತಿಸುತ್ತಿಲ್ಲ. ನಾನು ಮದುವೆಯಾಗುವವರ ಕುರಿತು ಎಂದೂ ಯೋಚಿಸಿಲ್ಲ. ಅಲ್ಲದೇ ಈಗ ನನಗೆ ಮದುವೆಯ ಬಗ್ಗೆ ಯೋಚಿಸುವಷ್ಟು ಸಮಯವೂ ಇಲ್ಲ. ಸದ್ಯ ನಾನು ನನ್ನ ವೃತ್ತಿಯ ಮೇಲಷ್ಟೇ ಗಮನ ಹರಿಸಿದ್ದೇನೆ. ಮದುವೆಯ ಬಗ್ಗೆ ಮುಂದಿನ ದಿನಗಳಲ್ಲಿ ಯೋಚಿಸುತ್ತೇನೆ. ನನಗೆ ಇಲ್ಲಿಯವರೆಗೆ ಯಾರ ಮೇಲೂ ಪ್ರೀತಿ ಹುಟ್ಟಿಲ್ಲ. ಇದೆಲ್ಲಾ ಗಾಸಿಪ್‌ ಅಷ್ಟೇ’ ಎಂದು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ‘ನನ್ನ ಬಗ್ಗೆ ಸುಮ್ಮ ಸುಮ್ಮನೆ ಇಲ್ಲದ ಗಾಸಿಪ್‌ಗಳನ್ನು ಸೃಷ್ಟಿಸಬೇಡಿ’ ಎಂದು ಅವರು ಮನವಿ ಮಾಡಿದ್ದಾರೆ.

ಲಾಕ್‌ಡೌನ್‌ನ ಈ ಸಮಯದಲ್ಲಿ ಪುಸ್ತಕಗಳನ್ನು ಓದುವ ಮೂಲಕ ಸಮಯ ಕಳೆಯುತ್ತಿದ್ದಾರಂತೆ ಈ ಬೆಡಗಿ.

ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಾಶಿ ಕೈಯಲ್ಲಿ ಸದ್ಯ ನಾಲ್ಕು ಸಿನಿಮಾಗಳಿವೆ. ‘ಸೈತಾನ್‌ ಕಾ ಬಚ್ಚಾ’, ‘ಅರಣ್ಮನೈ 3’, ‘ಸೂರ್ಯ 39’ ಹಾಗೂ ‘ಮೇಥಾವಿ’ ಸಿನಿಮಾಗಳಲ್ಲಿ ರಾಶಿ ನಟಿಸುತ್ತಿದ್ದಾರೆ.

ವಿಜಯ್‌ದೇವರಕೊಂಡ ಅಭಿನಯದ ವರ್ಲ್ಡ್ ಫೇಮಸ್‌ ಲವರ್‌ ಸಿನಿಮಾದಲ್ಲೂ ರಾಶಿ ನಟಿಸಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು