ಬೆಂಗಳೂರು: ಬಹುಭಾಷಾ ನಟಿರಶ್ಮಿಕಾ ಮಂದಣ್ಣ ನಟನೆಯ ಮೊದಲ ಬಾಲಿವುಡ್ ಚಿತ್ರ ‘ಮಿಷನ್ ಮಜ್ನು’ ಸಿನಿಮಾಕ್ಕೆ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವ ಭಾಗ್ಯ ಇಲ್ಲವಾಗಿದೆ.

ಹೌದು ‘ಮಿಷನ್ ಮಜ್ನು’ ಚಿತ್ರ ನೇರವಾಗಿ ಓಟಿಟಿಗೆ ಬಿಡುಗಡೆಯಾಗುತ್ತಿದೆ.ಈ ಚಿತ್ರದಲ್ಲಿ ಸಿದ್ಧಾರ್ಥ ಮಲ್ಹೋತ್ರಾ ಅವರಿಗೆ ನಾಯಕಿಯಾಗಿ ರಶ್ಮಿಕಾ ನಟಿಸಿದ್ದಾರೆ.

ನೆಟ್‌ಫ್ಲಿಕ್ಸ್‌ನಲ್ಲಿ ಜನವರಿ 20ಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. ಈ ಚಿತ್ರಕ್ಕೆಥಿಯೇಟರ್‌ಗಳು ಸಿಗದಿರುವುದು ಸಮಸ್ಯೆಯಾಗಿದೆ. ಹೀಗಾಗಿ ನೇರವಾಗಿ ಒಟಿಟಿಗೆ ಬಿಡುಗಡೆಯಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಶಂತನು ಬಾಗ್ಚಿ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಪರ್ಮೀತ್ ಸೇಠಿ, ಝಾಕಿರ್ ಹುಸೇನ್, ಶರೀಬ್ ಹಷ್ಮಿ ಸೇರಿದಂತೆ ಹಲವರು ನಟಿಸಿದ್ದಾರೆ. ಮಿಷನ್ ಮಜ್ನು ಸಿನಿಮಾವನ್ನು ರೂನಿ ಸೋಲಿ, ಅಮರ್ ಬುಟಾಲಾ ಹಾಗೂ ಗರಿಮಾ ಮೆಹ್ತಾ ನಿರ್ಮಾಣ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಭಾರತದ ಯುವ ಗುಪ್ತಚರನ ಹೋರಾಟ ಹಾಗೂ ಪ್ರೇಮಕಥೆಯನ್ನು ಈ ಚಿತ್ರ ಹೊಂದಿದೆ.

ರಶ್ಮಿಕಾ ಅಭಿನಯದಬಾಲಿವುಡ್ ಸಿನಿಮಾ ’ಗುಡ್ ಬೈ’ಇತ್ತೀಚೆಗೆ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಸೋತಿದೆ. ಇದಕ್ಕಿಂತಮೊದಲೇ ಮಿಷನ್ ಮಜ್ನು ಚಿತ್ರಕ್ಕೆ ರಶ್ಮಿಕಾ ಸಹಿ ಮಾಡಿದ್ದರು. ಕಾರಣಾಂತರಗಳಿಂದ ಮಿಷನ್ ಮಜ್ನು ಸಿನಿಮಾ ಬಿಡುಗಡೆಯಾಗುವುದು ತಡವಾಗುತ್ತಾ ಬಂದಿತ್ತು. ಹೀಗಾಗಿ ಗುಡ್ ಬೈ ಮೊದಲು ಬಿಡುಗಡೆಯಾಗಿತ್ತು.

ಅಬ್ಬಾ ಅವತಾರ್2 ಸಿನಿಮಾ ಬಜೆಟ್ ಇಷ್ಟೊಂದಾ! ಇದುವರೆಗಿನ ಎಲ್ಲ ದಾಖಲೆಗಳು ಧೂಳಿಪಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.