‘ಗ್ರೀನ್ ಇಂಡಿಯಾ ಚಾಲೆಂಜ್’ಗೆ ಸ್ಯಾಂಡಲ್ವುಡ್ನ ‘ಕ್ರಶ್’ ರಶ್ಮಿಕಾ ಮಂದಣ್ಣ ಕೈಜೋಡಿಸಿದ್ದಾರೆ. ತೆಲುಗು ನಟಿ ಸಮಂತಾ ಅಕ್ಕಿನೇನಿ ಹಾಕಿದ್ದ ಸವಾಲು ಸ್ವೀಕರಿಸಿ, ತಮ್ಮ ಮನೆಯ ಕೈತೋಟದಲ್ಲಿ ಗಿಡವೊಂದನ್ನು ನೆಟ್ಟು ನೀರೆರೆದಿದ್ದಾರೆ. ಈ ವಿಡಿಯೊ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ರಶ್ಮಿಕಾ ಹಂಚಿಕೊಂಡಿದ್ದಾರೆ.

ಆಂಧ್ರದ ರಾಜ್ಯಸಭಾ ಸದಸ್ಯ ಜೋಗಿನಿಪಲ್ಲಿ ಸಂತೋಷ್ ಕುಮಾರ್ ಆರಂಭಿಸಿದ ‘ಗ್ರೀನ್ ಇಂಡಿಯಾ ಚಾಲೆಂಜ್’ ಯಶಸ್ವಿಯಾಗಿ ಮುಂದುವರೆದಿದೆ.ಗ್ರೀನ್ ಇಂಡಿಯಾ ಚಾಲೆಂಜ್ ಭಾಗವಾಗಿ ಸೆಲೆಬ್ರಿಟಿಗಳು ಗಿಡಗಳನ್ನ ನಡುವ ಮೂಲಕ ಮತ್ತೆ ಮೂವರಿಗೆ ಗಿಡಗಳನ್ನ ನೆಡುವಂತೆ ಚಾಲೆಂಜ್ ದಾಟಿಸುತ್ತಿದ್ದಾರೆ. ‘ಬಾಹುಬಲಿ’ ಖ್ಯಾತಿಯ ಪ್ರಭಾಸ್ ಸೇರಿ ಹಲವು ನಟ– ನಟಿಯರು ಗ್ರೀನ್ ಇಂಡಿಯಾ ಚಾಲೆಂಜ್ನಲ್ಲಿ ಭಾಗವಹಿಸಿದ್ದಾರೆ.

‘ನನಗೆ ಗೊತ್ತಿರುವ ಎಲ್ಲರೂ ಪರಿಸರಕ್ಕೆ ಏನಾದರೂ ಒಳಿತನ್ನು ಮಾಡುತ್ತಾರೆ ಸರ್. ಇದು ನನಗೆ ಖಚಿತವಾಗಿ ಗೊತ್ತು. ಭಾರತವನ್ನು ವಾಸಿಸಲು ಹಸಿರು ಸ್ಥಳವನ್ನಾಗಿ ನಾವು ಮಾಡುತ್ತೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು’ ಎಂದು ರಶ್ಮಿಕಾ ಟ್ವೀಟ್ ಮಾಡಿದ್ದಾರೆ.

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ರಶ್ಮಿಕಾಗೆ ತೆಲುಗು ಮತ್ತು ತಮಿಳು ಚಿತ್ರರಂಗದಿಂದ ಕೈತುಂಬಾ ಅವಕಾಶಗಳಿವೆ.ಟಾಲಿವುಡ್ನಲ್ಲಿ ಸಮಂತಾ ಅಕ್ಕಿನೇನಿ ನಟಿಸಬೇಕಿದ್ದ ಸಿನಿಮಾಗಳೆಲ್ಲಾ ಕನ್ನಡದ ನಟಿ ರಶ್ಮಿಕಾ ಮಂದಣ್ಣಗೆ ಸಿಗುತ್ತಿವೆ ಎನ್ನುವ ಮಾತು ಇತ್ತೀಚಿನ ದಿನಗಳಲ್ಲಿ ಹೆಚ್ಚು ಚಾಲ್ತಿಯಲ್ಲಿದೆ. ಈ ನಡುವೆ ಸಮಂತಾ, ಕೊಡಗಿನ ಕುವರಿ ರಶ್ಮಿಕಾ ಸೇರಿ ಮೂವರಿಗೆ ಚಾಲೆಂಜ್ ಹಾಕಿದ್ದರು. ತಮ್ಮಮನೆಯ ಕೈತೋಟದಲ್ಲಿ ರಶ್ಮಿಕಾ ಗಿಡ ನೆಟ್ಟು, ಚಾಲೆಂಜ್ ನೀಡಿದ ಸಮಂತಾಗೂ ಧನ್ಯವಾದ ಹೇಳಿದ್ದಾರೆ. ಅಷ್ಟೆ ಅಲ್ಲ ರಶ್ಮಿಕಾ ಅವರು, ನಟಿಯರಾದ ರಾಶಿ ಖನ್ನಾ, ಕಲ್ಯಾಣಿ ಪ್ರಿಯದರ್ಶನ್ ಮತ್ತು ಆಶಿಕಾ ರಂಗನಾಥ್ ಅವರಿಗೆಗ್ರೀನ್ ಇಂಡಿಯಾ ಚಾಲೆಂಜ್ ದಾಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.