ಗುರುವಾರ , ಜುಲೈ 29, 2021
21 °C

ಆನ್‌ಲೈನ್‌ನಲ್ಲಿ ‘ರಿವೈಂಡ್‌’ಗೆ ಡಿಮ್ಯಾಂಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೇಜಸ್‌ ನಿರ್ಮಾಣ, ನಿರ್ದೇಶನ ಮತ್ತು ಅಭಿನಯದ ‘ರಿವೈಂಡ್‌’ ಚಿತ್ರ ಇದೀಗ ಆನ್‌ಲೈನ್‌ನಲ್ಲಿ ಬೇಡಿಕೆ ಪಡೆದಿದೆ. ಬುಕ್‌ಮೈ ಶೋದಲ್ಲಿ ಪ್ರಸಾರವಾಗುತ್ತಿರುವ ಈ ಚಿತ್ರಕ್ಕೆ ಇದೀಗ ನೆಟ್‌ಫ್ಲಿಕ್ಸ್‌ನಿಂದಲೂ ಬೇಡಿಕೆ ಬಂದಿದೆ. ಸುವರ್ಣ ಟಿವಿಗೆ ಪ್ರಸಾರದ ಹಕ್ಕು ಮಾರಾಟವಾಗಿದೆ ಎಂದರು ತೇಜಸ್‌.

ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಲಾಕ್‌ಡೌನ್‌ನಿಂದಾಗಿ ಚಿತ್ರಮಂದಿರಗಳು ಮುಚ್ಚಿದವು. ಅತ್ತ ಪ್ರದರ್ಶನವೂ ಅಲ್ಲ, ಇತ್ತ ಪ್ರಸಾರವೂ ಸಾಧ್ಯವಾಗದ ಇಕ್ಕಟ್ಟಿನಲ್ಲಿ ಸಿಲುಕಿದ್ದರು ತೇಜಸ್‌. ಕೆಲವೇ ದಿನಗಳಲ್ಲಿ ಬುಕ್‌ಮೈ ಶೋ ತನ್ನ ಒಟಿಟಿ ವೇದಿಕೆಯನ್ನು ತೆರೆಯಿತು. ಅದು ‘ರಿವೈಂಡ್‌’ಗೆ ವರದಾನವಾಗಿ ಪರಿಣಮಿಸಿದೆ ಎಂದು ತೇಜ್‌ ಕೊಂಚ ನಿರಾಳಭಾವದಲ್ಲಿ ಹೇಳಿದರು. ಚಿತ್ರ ದುಬೈನಲ್ಲೂ ಸಹಿತ ವಿವಿಧ ಅರಬ್‌ ರಾಷ್ಟ್ರಗಳಲ್ಲಿ ಬಿಡುಗಡೆ ಆಗಲು ಸಿದ್ಧವಾಗಿದೆ. ಚಿತ್ರದಲ್ಲಿ ತೇಜಸ್‌ ಹಾಗೂ ಚಂದನಾ ನಟಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು