ಆರ್‌ಜಿವಿ ಮುಂದಿನ ಚಿತ್ರ ’ಪವರ್ ಸ್ಟಾರ್‘

ವಿವಾದಾತ್ಮಕ ನಿರ್ದೇಶಕ ಎಂದೇ ಕರೆಸಿಕೊಳ್ಳುವ ರಾಮ್ ಗೋಪಾಲ್ ವರ್ಮ ತಮ್ಮ ಮುಂದಿನ ಚಿತ್ರದ ಹೆಸರನ್ನು ಬಹಿರಂಗ ಪಡಿಸಿದ್ದಾರೆ. ಆರ್‌ಜಿವಿ ಮುಂದಿನ ಚಿತ್ರದ ಹೆಸರು ‘ಪವರ್ ಸ್ಟಾರ್‘.
ಲಾಕ್‌ಡೌನ್ ಅವಧಿಯನ್ನು ಒಂದು ನಿಮಿಷ ಕೂಡ ವ್ಯರ್ಥ ಮಾಡದೇ ಒಂದರ ಹಿಂದೆ ಒಂದರಂತೆ ಸಿನಿಮಾಗಳನ್ನು ಮಾಡಿ ಒಟಿಟಿಯಲ್ಲಿ ಬಿಡುಗಡೆ ಮಾಡುತ್ತಿದ್ದಾರೆ ರಕ್ತಚರಿತ್ರ ಖ್ಯಾತಿಯ ನಿರ್ದೇಶಕ. ಈ ಹಿಂದೆ ‘ಕ್ಲೈಮ್ಯಾಕ್ಸ್‘ ಹಾಗೂ ‘ಎನ್‌ಎನ್‌ಎನ್’ ಹೆಸರಿನ ಸಿನಿಮಾಗಳನ್ನು ಬಿಡುಗಡೆ ಮಾಡಿದ್ದಾರೆ. ಸದ್ಯಕ್ಕೆ ‘ಕೊರೊನಾ ವೈರಸ್’ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ.
ಈ ನಡುವೆ ಆಂಧ್ರದಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣವನ್ನು ಸಿನಿಮಾ ಮಾಡುವುದಾಗಿ ಹೇಳಿದ್ದು ಆ ಸಿನಿಮಾದ ಶೂಟಿಂಗ್ ಕೂಡ ಆರಂಭವಾಗಿದೆ. ಇವೆಲ್ಲದರ ನಡುವೆ ’ಪವರ್ ಸ್ಟಾರ್’ ಎಂಬ ಹೊಸ ಸಿನಿಮಾವನ್ನೂ ಘೋಷಿಸಿದ್ದಾರೆ.
ಈ ಹಿಂದೆ ‘ಅಮ್ಮ ರಾಜ್ಯಂಲೋ ಕಡಪ ಬಿಡ್ಡಲು’ ಸಿನಿಮಾದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರನ್ನು ಅಪಹಾಸ್ಯ ಮಾಡಿದ್ದರು ಆರ್‌ಜಿವಿ. ಈಗ ಪವರ್ ಸ್ಟಾರ್ ಸಿನಿಮಾ ಕತೆ ಸಾರಾಂಶ ಏನು ಎಂಬುದನ್ನು ಕಾದು ನೋಡಬೇಕಿದೆ.
ಇದು ಎರಡು ಗಂಟೆಗಳ ಸಿನಿಮಾ ಅಲ್ಲ ಎಂಬ ವಿಷಯವನ್ನು ಸ್ವತಃ ಆರ್‌ಜಿವಿ ಬಹಿರಂಗ ಪಡಿಸಿದ್ದಾರೆ.
ಪವನ್ ಕಲ್ಯಾಣ್ ಆಂಧ್ರಪ್ರದೇಶದ ಮುಂದಿನ ಮುಖ್ಯಮಂತ್ರಿಯಾದರೆ ನನಗೆ ಇಷ್ಟ ಎಂದು ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು ಆರ್‌ಜಿವಿ. ಅಲ್ಲದೇ ಕಳೆದ ಚುನಾವಣೆಯಲ್ಲಿ ಪವನ್ ಎರಡೂ ಕ್ಷೇತ್ರದಲ್ಲಿ ಸೋತಿರುವುದು ನನಗೆ ಅಘಾತದ ವಿಷಯವಾಗಿತ್ತು ಎಂದು ಹೇಳಿಕೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.