ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದು ರೈತ ಹೋರಾಟದ ಪರ ಟ್ವೀಟ್ ಮಾಡಿದ್ದ ಪಾಪ್ ತಾರೆ ರಿಹಾನ ಇಂದು ಅಂಬಾನಿ ಮನೆಗೆ

Published 29 ಫೆಬ್ರುವರಿ 2024, 14:37 IST
Last Updated 29 ಫೆಬ್ರುವರಿ 2024, 14:37 IST
ಅಕ್ಷರ ಗಾತ್ರ

ಜಾಮ್‌ನಗರ(ಗುಜರಾತ್‌): ‘ಶೈನ್ ಲೈಕ್‌ ಅ ಡೈಮಂಡ್‘, ‘ವರ್ಕ್‌ ವರ್ಕ್‌ ವರ್ಕ್‘ ಮುಂತಾದ ಜನಪ್ರಿಯ ಹಾಡುಗಳನ್ನು ಹಾಡಿದ ಪಾಪ್ ಗಾಯಕಿ, ಜನಪ್ರಿಯ ಮೇಕಪ್‌ ಬ್ರ್ಯಾಂಡ್ ‘ಫೆಂಟಿ ಬ್ಯೂಟಿ’ ಕಂಪೆನಿಯ ಒಡತಿ ರಿಹಾನ ಇಂದು ಗುಜರಾತ್‌ನ ಜಾಮ್‌ನಗರಕ್ಕೆ ಬಂದಿಳಿದಿದ್ದಾರೆ.

ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಮಗ ಅನಂತ ಅಂಬಾನಿ ಅವರ ಮದುವೆ ಜುಲೈನಲ್ಲಿ ನಡೆಯಲಿದ್ದು, ಮದುವೆಪೂರ್ವ ಕಾರ್ಯಕ್ರಮಗಳು ನಾಳೆಯಿಂದ(ಮಾ.1) ಮೂರು ದಿನಗಳ ಕಾಲ ನಡೆಯಲಿವೆ. ಈ ಕಾರ್ಯಕ್ರಮಕ್ಕೆ ರಿಹಾನ ಅವರಿಗೆ ಆಹ್ವಾನ ನೀಡಲಾಗಿದ್ದು, ಕಾರ್ಯಕ್ರಮದಲ್ಲಿ ಜನರನ್ನು ರಂಜಿಸಲಿದ್ದಾರೆ ಎನ್ನಲಾಗಿದೆ.

ಆ ಒಂದು ಟ್ವೀಟ್‌...

ಇದೇ ಫೆ.13ರಿಂದ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿದಂತೆ ಅನೇಕ ಬೇಡಿಕೆಗಳನ್ನು ಮುಂದಿಟ್ಟು ರೈತರು ಹೋರಾಟ ಆರಂಭಿಸಿದ್ದಾರೆ. ಯುವರೈತ ಶುಭಕರಣ್ ಸಿಂಗ್ ಅವರ ಸಾವಿನ ನಂತರ ಹೋರಾಟವನ್ನು 2 ದಿನಗಳ ಕಾಲ ಮುಂದೂಡಲಾಗಿತ್ತು. ನಂತರ ಅದು ಫೆ. 29ರವರೆಗೂ ಖನೌರಿ ಮತ್ತು ಶಂಭು ಗಡಿಯಲ್ಲಿ ಸ್ಥಾಪಿಸಲಾಗಿರುವ ಟೆಂಟ್‌ಗಳಲ್ಲಿ ಮುಂದುವರಿಯಲಿದೆ ಎಂದು ರೈತ ಮುಖಂಡರು ತಿಳಿಸಿದ್ದರು.

2021ರಲ್ಲೂ ಇದೇ ರೀತಿ ವಿವಿಧ ಬೇಡಿಕೆಗೆ ಒತ್ತಾಯಿಸಿ ರೈತರು ‘ದೆಹಲಿ ಚಲೋ’ ಹೋರಾಟ ನಡೆಸಿದ್ದು, ಇದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದಕ್ಕೆ ಕಾರಣ ರಿಹಾನ ಮಾಡಿದ ಒಂದು ಟ್ವೀಟ್‌. ಈ ಒಂದು ಟ್ವೀಟ್ ರೈತರ ಹೋರಾಟಕ್ಕೆ ಇನ್ನಷ್ಟು ಬಲ ನೀಡಿತ್ತು ಎಂದರೆ ತಪ್ಪಾಗಲಾರದು.

‘ನಾವು ಇದರ ಬಗ್ಗೆ ಯಾಕೆ ಮಾತನಾಡಬಾರದು #farmersprotest‘ ಎಂದು ಒಂದೇ ಸಾಲಿನಲ್ಲಿ ರಿಹಾನ ಟ್ವೀಟ್ ಮಾಡಿದ್ದರು. ರಿಹಾನ ಟ್ವೀಟ್‌ಗೆ ಆಗ ಪರ–ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಇದಾದ ಬಳಿಕ ಬಿಬಿಸಿ ಸೇರಿದಂತೆ ಅನೇಕ ಆಂಗ್ಲ ಭಾಷೆಯ ಸುದ್ದಿಸಂಸ್ಥೆಗಳು ರೈತರ ಹೋರಾಟದ ಸುದ್ದಿಗಳನ್ನು ಬಿತ್ತರಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT