ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆಲುಗಿನಲ್ಲಿ ರಿಷಿ ಹೊಸ ಪ್ರಾಜೆಕ್ಟ್‌

Published 6 ನವೆಂಬರ್ 2023, 23:29 IST
Last Updated 6 ನವೆಂಬರ್ 2023, 23:29 IST
ಅಕ್ಷರ ಗಾತ್ರ

ಹಾಸ್ಯ ಪ್ರಧಾನ ಚಿತ್ರಗಳಷ್ಟೇ ಅಲ್ಲದೆ ಸಸ್ಪೆನ್ಸ್‌, ಥ್ರಿಲ್ಲರ್‌ ಕಥೆಗಳಲ್ಲೂ ತಮ್ಮ ನಟನೆಯ ಸಾಮರ್ಥ್ಯ ಪ್ರದರ್ಶಿಸಿರುವ ನಟ ರಿಷಿ ಅವರಿಗೆ ತೆಲುಗು ಇಂಡಸ್ಟ್ರಿಯಲ್ಲಿ ಹೊಸ ಪ್ರಾಜೆಕ್ಟ್‌ಗಳು ಕೈಸೇರುತ್ತಿವೆ. ‘ಶೈತಾನ್‌’ ಎಂಬ ವೆಬ್‌ಸಿರೀಸ್‌ನಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದ ರಿಷಿ, ಹೊಸ ತೆಲುಗು ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾರೆ. 

‘ಆಪರೇಷನ್ ಅಲಮೇಲಮ್ಮ’, ‘ಕವಲುದಾರಿ’, ‘ನೋಡಿ ಸ್ವಾಮಿ ನಾವು ಇರೋದು ಹೀಗೆ’ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ರಿಷಿ, ಇತ್ತೀಚೆಗೆ ‘ಶೈತಾನ್‌’ನಲ್ಲಿನ ನಟನೆಗಾಗಿ ಅತ್ಯುತ್ತಮ ಖಳನಾಯಕ ಒಟಿಟಿ ಪ್ಲೇ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೇ ವೆಬ್‌ ಸಿರೀಸ್‌ ಮೂಲಕ ತೆಲುಗು ಪ್ರೇಕ್ಷಕರಿಗೆ ರಿಷಿ ಹತ್ತಿರವಾಗಿದ್ದಾರೆ. ಇದರಿಂದಾಗಿಯೇ ತೆಲುಗು ಇಂಡಸ್ಟ್ರಿಯಿಂದ ಹೊಸ ಅವಕಾಶಗಳೂ ರಿಷಿ ಅವರನ್ನು ಅರಸಿ ಬಂದಿವೆ. 

ರವಿ ಪಸನ ಫಿಲ್ಮ್‌ ಕಾರ್ಪೊರೇಷನ್‌ನಡಿ ನಿರ್ಮಾಣವಾಗುತ್ತಿರುವ, ಗೋಪಿ ವಿಹಾನಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಹೊಸ ಚಿತ್ರದಲ್ಲಿ ತಿರುವೀರ್, ಫರಿಯಾ ಅಬ್ದುಲ್ಲಾ, ರವೀಂದರ್ ವಿಜಯ್, ಶೆಲ್ಲಿ ಕಿಶೋರ್, ಕಾಲಕೇಯ ಪ್ರಭಾಕರ್, ಚಿರಾಗ್ ಜಾನಿ ಮುಂತಾದವರು ನಟಿಸುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಸಿನಿಮಾದ ಶೂಟಿಂಗ್ ಭರದಿಂದ ಸಾಗಿದೆ. ನೈಜ ಘಟನೆ ಪ್ರೇರೇಪಿತ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಿಷಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಕನ್ನಡದಲ್ಲಿ ‘ರಾಮನ ಅವತಾರ’ ಎನ್ನುವ ಸಿನಿಮಾ ಬಿಡುಗಡೆಗೆ ರಿಷಿ ಎದುರುನೋಡುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT