ಮಂಗಳವಾರ, ಮೇ 24, 2022
27 °C

ಫೆ.20ಕ್ಕೆ ರಾಬರ್ಟ್‌ ಹೊಸ ಹಾಡಿನ ಲಿರಿಕಲ್‌ ವಿಡಿಯೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಟ ದರ್ಶನ್‌ ಅಭಿನಯದ ರಾಬರ್ಟ್‌ ಚಿತ್ರದ ಟ್ರೇಲರ್‌ ಯೂಟ್ಯೂಬ್‌ನಲ್ಲಿ ಏಳು ಲಕ್ಷಕ್ಕೂ ಅಧಿಕ ವ್ಯೂವ್ಸ್‌ ಪಡೆದ ಬೆನ್ನಲ್ಲೇ, ಚಿತ್ರ ತಂಡವು ಎರಡನೇ ಹಾಡು ಬಿಡುಗಡೆಯನ್ನು ಘೋಷಿಸಿದೆ.

ಚಿತ್ರದಲ್ಲಿನ ‘ಕಣ್ಣು ಹೊಡಿಯಾಕ’ ಹಾಡಿನ ಲಿರಿಕಲ್‌ ವಿಡಿಯೊ ಫೆ.20ರಂದು ಸಂಜೆ 4.05ಕ್ಕೆ ಬಿಡುಗಡೆಯಾಗಲಿದೆ. ಈ ಕುರಿತು ಟ್ವಿಟರ್‌ನಲ್ಲಿ ಪೋಸ್ಟರ್‌ ಮೂಲಕ ತರುಣ್‌ ಸುಧೀರ್‌ ಮಾಹಿತಿ ನೀಡಿದ್ದಾರೆ. ಟ್ರೇಲರ್‌ನಲ್ಲಿ ಎರಡು ವಿಭಿನ್ನ ಪಾತ್ರಗಳಲ್ಲಿ ಗೋಚರಿಸಿಕೊಂಡಿದ್ದ ದರ್ಶನ್‌, ಈ ಹಾಡಿನಲ್ಲಿ ಕೆಂಪು ಬಣ್ಣದ ಜ್ಯಾಕೆಟ್‌ ಧರಿಸಿ ಕ್ಲಾಸ್‌ ಲುಕ್‌ನಲ್ಲಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಚಿತ್ರದ ಮೂಲಕ ಚಂದನವನಕ್ಕೆ ಕಾಲಿಡುತ್ತಿರುವ ನಟಿ ಆಶಾ ಭಟ್‌ ಕೂಡಾ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ.

ಶಂಕರ್‌ ಮಹಾದೇವನ್‌ ಅವರು ಹಾಡಿರುವ ಚಿತ್ರದ ಒಂದು ಹಾಡು ‘ಜೈ ಶ್ರೀರಾಮ್‌’ ಈಗಾಗಲೇ ಯೂಟ್ಯೂಬ್‌ನಲ್ಲಿ ಒಂದು ಕೋಟಿಗೂ ಅಧಿಕ ವ್ಯೂವ್ಸ್‌ ಪಡೆದಿದೆ. ಇದು ಕಳೆದ ವರ್ಷದ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿತ್ತು. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲದಲ್ಲಿ ಮಾ.11ರಂದು ಚಿತ್ರವು ತೆರೆ ಮೇಲೆ ಬರಲಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು