ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭಾಸ್‌ 'ಸಾಹೊ' ಮೇಲೆ ಅಭಿಮಾನಿಗಳ ನಿರೀಕ್ಷೆ; ಟ್ವಿಟರ್‌ನಲ್ಲಿ ವಿಮರ್ಶೆಗಳ ಮಳೆ

ಚಿತ್ರತೆರೆಗೆ
Last Updated 30 ಆಗಸ್ಟ್ 2019, 10:43 IST
ಅಕ್ಷರ ಗಾತ್ರ

ಬೆಂಗಳೂರು: ತೆಲುಗಿನ ಸೂಪರ್‌ ಸ್ಟಾರ್‌, ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿನಯದ ‘ಸಾಹೊ’ ಚಿತ್ರ ಶುಕ್ರವಾರ ತೆರೆಕಂಡಿದೆ. ಚಿತ್ರವು ತೆಲುಗು ಸೇರಿದಂತೆ ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ.

ಈವರೆಗೂ ಬಾಹುಬಲಿ ಗುಂಗಿನಲ್ಲಿದ್ದ ಪ್ರಭಾಸ್‌ ಅಭಿಮಾನಿಗಳು ಸಾಹೊ ಕಾಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಾಹೊ ಸದ್ದು ಜೋರಾಗಿದೆ. ಚಿತ್ರದ ಟೈಟಲ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದ್ದು, ‘ಇನ್ನೇನು ಕೆಲವೇ ನಿಮಿಷಗಳಲ್ಲಿ ಚಿತ್ರ ನೋಡುತ್ತಿದ್ದೇನೆ, ಸಿನಿಮಾ ಶುರುವಾಯಿತು, ಹೇಗಿರಬಹುದು ಆ್ಯಕ್ಷನ್‌ ದೃಶ್ಯಗಳು,...‘ ಹೀಗೆ ಹಲವು ಟ್ವೀಟ್‌ಗಳು ಹರಿದಾಡುತ್ತಿವೆ. ಪ್ರೇಮಿಯರ್‌ ಶೋ ನೋಡಿದವರು, ಬೆಳ್ಳಂಬೆಳ್ಳಗ್ಗೆಯೇ ಸಿನಿಮಾ ಪ್ರದರ್ಶನ ಕಂಡವರು ಫೋಟೊಗಳನ್ನು ಪ್ರಕಟಿಸಿಕೊಳ್ಳುವ ಜತೆಗೆ ಅಭಿಪ್ರಾಯಗಳನ್ನೂ ಹಂಚಿಕೊಳ್ಳುತ್ತಿದ್ದಾರೆ.

ಭಾರೀ ಬಜೆಟ್‌ ಸಿನಿಮಾ ಆಗಿರುವುದರಿಂದ ಪ್ರೇಕ್ಷಕರ ನಿರೀಕ್ಷೆಯೂ ಹೆಚ್ಚಿದೆ. ‘ಸಿನಿಮಾ ಪೂರ್ತಿ ಪ್ರಭಾಸ್ ಮಯ, ಕಥೆ, ಚಿತ್ರಕಥೆ ಎಂಥದ್ದೂ ಇಲ್ಲ..‘, ‘ನಿರ್ದೇಶಕರು ಇನ್ನೂ ಸರಿಯಾಗಿ ನಿರ್ವಹಿಸಬೇಕಿತ್ತು, ತುಂಬಾ ಕಂಪ್ಯೂಷನ್‌ ಆಗುತ್ತೆ..‘, ‘ಮೊದಲಾರ್ಧ ತುಂಬಾ ಸ್ಲೋ..‘, ‘ನಿರೀಕ್ಷೆಯನ್ನು ತಲುಪಿಲ್ಲ..‘, ‘ಪ್ರಭಾಸ್‌ ತನ್ನ ಶೇ 100ರಷ್ಟು ಅರ್ಪಿಸಿದ್ದಾರೆ. ಇದು ಅದ್ಭುತ ದೃಶ್ಯ ವೈಭವ..‘ ಎಂದೆಲ್ಲ ವಿಮರ್ಶಿಸುವುದರಲ್ಲಿ ಸಿನಿಮಾ ಪ್ರಿಯರು ಮಗ್ನರಾಗಿದ್ದಾರೆ.

₹ 350 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾ ದೇಶದ ಸುಮಾರು 4500 ಚಿತ್ರಮಂದಿರಗಳಲ್ಲಿ ತೆರೆಕಂಡಿದೆ.

ಬಾಲಿವುಡ್‌ ನಟಿ ಶ್ರದ್ಧಾ ಕಪೂರ್‌ ನಾಯಕಿಯಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್‌ನ ನೀಲ್‌ ನಿತಿನ್ ಮುಕೇಶ್‌, ಜಾಕಿ ಶ್ರಾಫ್‌, ಮಂದಿರಾ ಬೇಡಿ, ಮಹೇಶ್ ಮಂಜ್ರೇಕರ್, ನರೇಂದ್ರ ಝಾ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಸುಜೀತ್‌ ಚಿತ್ರವನ್ನು ನಿರ್ದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT