‘ಸೈದಾಪುರ’ ಚಿತ್ರದ ಹಾಡುಗಳ ಬಿಡುಗಡೆ ಇತ್ತೀಚೆಗೆ ನಡೆದಿದೆ. ‘ಸೈದಾಪುರ’ ಯಾದಗಿರಿ ಜಿಲ್ಲೆಯ ಒಂದು ಪುಟ್ಟ ಹಳ್ಳಿ. ಭಾನುಪ್ರಕಾಶ್ ಅಭಿನಯದ ಚಿತ್ರ ಇದು. ಸಂಗೀತಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಶ್ರೀರಾಮ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.

ಸಮಾರಂಭದಲ್ಲಿ ನಾಯಕ ಭಾನು ಪ್ರಕಾಶ್ ಅವರು ಅಗಲಿದ ತಮ್ಮ ಅಣ್ಣನನ್ನು ನೆನೆದು ಭಾವುಕರಾದರು. ‘ನನ್ನ ಅಣ್ಣ ಕೂಡ ಒಂದು ಸಿನಿಮಾ ಮಾಡಿದ್ದ. ಚಿತ್ರ ತೆರೆಗೆ ಬರುವ ಮುಂಚೆಯೇ ಅವನು ನಮ್ಮನ್ನು ಬಿಟ್ಟು ಹೋದ. ಈ ಸಂಕಟ ನಮ್ಮ ಕುಟುಂಬನ್ನು ಇಂದಿಗೂ ಕಾಡುತ್ತಿದೆ ಎಂದರು. ಅಣ್ಣನ ನಿಧನದ ನಂತರ ಊರಿನ ಕೆಲವರು ನಮ್ಮನ್ನು ನೋಡುತ್ತಿದ್ದ ದೃಷ್ಟಿಯೇ ಬೇರೆ ಆಯಿತು. ನಮ್ಮನ್ನು ನೋಡಿ ನಗುವವರ ಮುಂದೆ ಎದ್ದು ನಿಲ್ಲಬೇಕು ಎಂದು ನಾನು ಈ ಸಿನಿಮಾದಲ್ಲಿ ನಟಿಸಿದ್ದೇನೆ. ನನ್ನ ಅಣ್ಣನ ಹಲವು ಸ್ನೇಹಿತರಾದ ಅಶೋಕ್, ಅಬ್ದುಲ್ ರೋಫ್ ಸಿದ್ವಿಕ್, ನಿಂಗಪ್ಪ, ಇರ್ಫಾನ್, ಮಲ್ಲೇಶ್ ಮುಂತಾದವರು ನನ್ನ ಜೊತೆ ನಿಂತು ಚಿತ್ರವನ್ನು ಬಿಡುಗಡೆ ಹಂತದವರೆಗೂ ತಂದಿದ್ದಾರೆ’ ಎಂದರು ಭಾನುಪ್ರಕಾಶ್.

ಸಿರಿ ಮ್ಯೂಸಿಕ್ ಈ ಹಾಡನ್ನು ಹೊರತಂದಿದೆ. ಜೆ ಡಿ ಎಸ್ ಮುಖಂಡ ಹನುಮೇಗೌಡ ಬೀರಣಕಲ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಅಶೋಕ್ ಬಿ ಹಾಗೂ ಅಬ್ದುಲ್ ರೋಫ್ ಸಿದ್ವಿಕ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

ಮಾಣಿಕ್ಯ ಪ್ರಭು, ತಮ್ಮುಡು ಸಾಯಿ ಛಾಯಾಗ್ರಹಣ, ಬಾಲು ನೃತ್ಯ ನಿರ್ದೇಶನ ಹಾಗೂ ಕವಿತ ಭಂಡಾರಿ ಸಂಕಲನವಿರುವ ಈ ಚಿತ್ರಕ್ಕೆ ರಾಜ್ ಭಾಸ್ಕರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರ ಮುಂದಿನ ತಿಂಗಳು ತೆರೆಗೆ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.