ನಟ ಸೈಫ್ ಅಲಿಖಾನ್ ‘ಬಂಟಿ ಔರ್ ಬಬ್ಲಿ’ ಚಿತ್ರದ ಸೀಕ್ವೆಲ್ನಲ್ಲಿ ನಟಿಸಲಿದ್ದಾರೆ. ಸದ್ಯ ಅವರು ‘ಲಾಲ್ ಕಪ್ತಾನ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು,ಸುಮಾರು ಸಿನಿಮಾಗಳ ಅವಕಾಶಗಳು ಅವರ ಕೈಯಲ್ಲಿವೆ.

ಅಭಿಷೇಕ್ ಬಚ್ಚನ್ ಹಾಗೂ ರಾಣಿ ಮುಖರ್ಜಿಅಭಿನಯಿಸಿದ್ದ ‘ಬಂಟಿ ಔರ್ ಬಬ್ಲಿ’ ಚಿತ್ರದ ಸೀಕ್ವೆಲ್ನಲ್ಲಿ ನಟಿಸುವಂತೆ ಸೈಫ್ ಅವರನ್ನು ಸಿನಿಮಾ ತಂಡ ಭೇಟಿಯಾಗಿ ಮಾತುಕತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಈ ಚಿತ್ರದಲ್ಲೂ ಅಭಿಷೇಕ್ ಬಚ್ಚನ್ ಹಾಗೂ ರಾಣಿ ಮುಖರ್ಜಿ ಜೋಡಿಯಾಗಿ ಮುಂದುವರಿಯಲಿದ್ದಾರೆ. ಚಿತ್ರದ ಪ್ರಮುಖ ಪಾತ್ರಕ್ಕೆ ಸೈಫ್ ಬಣ್ಣ ಹಚ್ಚಲಿದ್ದಾರೆಎನ್ನಲಾಗಿದೆ. ‘ಬಂಟಿ ಔರ್ ಬಬ್ಲಿ’ ಚಿತ್ರವು 2005ರಲ್ಲಿ ಬಿಡುಗಡೆಯಾಗಿತ್ತು.

ಈ ಚಿತ್ರದ ಮೂಲಕ ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲಾರ್ ಬಾಲಿವುಡ್ಗೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಬಿ–ಟೌನ್ನಲ್ಲಿ ಹಬ್ಬಿದೆ. ‘ಗಲ್ಲಿ ಬಾಯ್’ ಖ್ಯಾತಿಯ ಸಿದ್ಧಾಂತ್ ಚತುರ್ವೇದಿ ಜೋಡಿಯಾಗಿ ಅವರು ನಟಿಸಲಿದ್ದಾರಂತೆ.ಈ ಚಿತ್ರಕ್ಕೆ ಹೊಸ ಮುಖವನ್ನು ಸಿನಿಮಾ ತಂಡ ಹುಡುಕುತ್ತಿತ್ತು. ಮಾನುಷಿ ಚಿಲ್ಲಾರ್ ಅವರನ್ನು ತಂಡ ಆಯ್ಕೆ ಮಾಡಿಕೊಂಡಿತು.

ಈ ಸೀಕ್ವೆಲ್ ಚಿತ್ರದಲ್ಲಿ ಎರಡು ಜೋಡಿಗಳು ಇರಲಿವೆ. ಅಭಿಷೇಕ್, ರಾಣಿ ಹಿರಿಯ ಜೋಡಿಗಳಾಗಿ ಹಾಗೂ ಮತ್ತೊಂದು ಯುವ ಜೋಡಿಯಾಗಿ ಮಾನುಷಿ– ಸಿದ್ಧಾಂತ್ ನಟಿಸಲಿದ್ದಾರೆ.

ಮೂಲ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಪೊಲೀಸ್ ಪಾತ್ರದಲ್ಲಿ ನಟಿಸಿದ್ದರು. ಸೀಕ್ವೆಲ್ನಲ್ಲಿಯೂ ಅವರು ಮುಂದುವರಿಯಲಿದ್ದಾರೆ.

ಈ ಸಿನಿಮಾದಲ್ಲಿ ಸೈಫ್ ಅಲಿಖಾನ್ ನಟಿಸಲು ಒಪ್ಪಿಕೊಂಡಲ್ಲಿ, ರಾಣಿ ಹಾಗೂ ಸೈಫ್ 11 ವರ್ಷಗಳ ಬಳಿಕ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವರಿಬ್ಬರು 2008ರಲ್ಲಿ ಬಿಡುಗಡೆಯಾಗಿದ್ದ ‘ಥೋಡಾ ಪ್ಯಾರ್ ಥೋಡಾ ಮ್ಯಾಜಿಕ್’ ಚಿತ್ರದಲ್ಲಿ ಜೊತೆಯಾಗಿ ತೆರೆ ಹಂಚಿಕೊಂಡಿದ್ದರು.

ಸದ್ಯ ರಾಣಿ ಮುಖರ್ಜಿ 2014ರಲ್ಲಿ ಬಿಡುಗಡೆಯಾಗಿದ್ದ ‘ಮರ್ದಾನಿ’ ಚಿತ್ರದ ಸೀಕ್ವೆಲ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.