ಗುರುವಾರ , ಡಿಸೆಂಬರ್ 12, 2019
17 °C

ಸಲ್ಮಾನ್‌– ಶೇರಾ ಒಡನಾಟಕ್ಕೆ 25 ವರ್ಷ

Published:
Updated:

ಬಾಲಿವುಡ್‌ ನಾಯಕ ನಟ ಸಲ್ಮಾನ್‌ ಖಾನ್ ನೆರಳಿನಂತಿರುವ ಅಜಾನುಬಾಹು ವ್ಯಕ್ತಿ ಶೇರಾ. ಸಲ್ಮಾನ್‌ ಕಷ್ಟ, ಸುಖಗಳಲ್ಲಿ ಸಮಾನ ಭಾಗಿ. ಶೇರಾ ಬಿಟ್ಟು ಸಲ್ಮಾನ್‌ ಖಾನ್‌ ಊಹಿಸುವುದು ಕಷ್ಟ! 

ತಮ್ಮ ನೆಚ್ಚಿನ ಬಾಡಿಗಾರ್ಡ್‌ ಶೇರಾ ಜತೆಗಿನ 25 ವರ್ಷಗಳ ಒಡನಾಟವನ್ನು ಸಲ್ಮಾನ್‌ ಖಾನ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

‘ಶೇರಾ ಜತೆಗಿನ ಒಡನಾಟಕ್ಕೆ 25 ವರ್ಷ! ಇಬ್ಬರ ನಡುವಿನ ಬಂಧ ಮತ್ತಷ್ಟು ಗಟ್ಟಿಯಾಗುತ್ತಲೇ ಇದೆ’ ಎಂದು ಸಲ್ಮಾನ್ ಖಾನ್ ಬರೆದಿದ್ದಾರೆ. ಶೇರಾ ತಮ್ಮ ಗೆಹಲ ಮೇಲೆ ಕೈ ಇಟ್ಟ ಚಿತ್ರವನ್ನು ಶೇರ್‌ ಮಾಡಿದ್ದಾರೆ. ಈ ಪೋಸ್ಟ್‌ ಅನ್ನು ಶೇರಾ ಹಂಚಿಕೊಂಡಿದ್ದು, ‘ನನ್ನ ದೇಹದಲ್ಲಿ ಕೊನೆಯ ಉಸಿರು ಇರುವವರೆಗೂ ಮಾಲಿಕ್‌ ಜತೆ ಈ ಸಂಬಂಧ ಇಷ್ಟೇ ಗಟ್ಟಿಯಾಗಿ ಇರಲಿದೆ’ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು