ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗ್‌ಬಾಸ್‌ ಸೀಸನ್‌ 14: ಸಲ್ಮಾನ್‌ ಖಾನ್ ಪಡೆಯುವ ಸಂಭಾವನೆ ಎಷ್ಟು ಗೊತ್ತೇ?

Last Updated 28 ಆಗಸ್ಟ್ 2020, 12:15 IST
ಅಕ್ಷರ ಗಾತ್ರ

ಹಿಂದಿಯ ಬಿಗ್‌ಬಾಸ್‌ ಸೀಸನ್‌ 14ಗೆ ಕ್ಷಣಗಣನೆ ಆರಂಭವಾಗಿದೆ. ಅಕ್ಟೋಬರ್‌ ತಿಂಗಳ ಮಧ್ಯದಲ್ಲಿ ಈ ರಿಯಾಲಿಟಿ ಶೋ ಆರಂಭವಾಗುವ ನಿರೀಕ್ಷೆಯಿದೆ.

ಬಿಗ್‌ಬಾಸ್‌ನ ಸೀಸನ್‌ 13 ವಿವಾದದ ಗೂಡಾಗಿದ್ದು ಎಲ್ಲರಿಗೂ ತಿಳಿದಿದೆ. ಆದರೆ, ಟೆಲಿವಿಷನ್‌ ರೇಟಿಂಗ್ಸ್‌ನಲ್ಲಿ ಈ ಶೋ ಹೊಸ ದಾಖಲೆ ಬರೆದಿತ್ತು. ಬಾಲಿವುಡ್‌ ನಟ ಸಲ್ಮಾನ್‌ ಖಾನ್ ಮತ್ತೆ ಈ ಕಾರ್ಯಕ್ರಮದ ನಿರೂಪಣೆಗೆ ಸಜ್ಜಾಗುತ್ತಿದ್ದಾರೆ. ಈಗಾಗಲೇ, ಕಲರ್ಸ್‌ ವಾಹಿನಿಯಲ್ಲಿ ಇದರ ಪ್ರೋಮೊಗಳು ಬಿತ್ತರಗೊಳ್ಳುತ್ತಿವೆ.

ಈ ನಡುವೆಯೇ ಸಲ್ಲು ಈ ಸೀಸನ್‌ಗೆ ಎಷ್ಟು ಸಂಭಾವನೆಯನ್ನು ಜೇಬಿಗಿಳಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಬಿಟೌನ್‌ನಲ್ಲಿ ಚರ್ಚೆ ಶುರುವಾಗಿದೆ. ಅವರಿಗೆ ಒಟ್ಟಾರೆ ಈ ಸೀಸನ್‌ನಲ್ಲಿ ಸುಮಾರು ₹ 250 ಕೋಟಿ ಸಂಭಾವನೆ ದೊರೆಯಲಿದೆ ಎಂಬುದು ಬಾಲಿವುಡ್‌ ಮೂಲಗಳ ಮಾಹಿತಿ.

ಸಲ್ಮಾನ್‌ ಖಾನ್ ಎರಡು ಸಂಚಿಕೆಗಳಿಗಾಗಿ ವಾರದಲ್ಲಿ ಒಂದು ದಿನ ಶೂಟಿಂಗ್‌ ನಡೆಸುತ್ತಾರಂತೆ. ಒಟ್ಟು 12 ವಾರಗಳ ಕಾಲ ಇದೇ ಮಾದರಿಯಲ್ಲಿ ಶೂಟಿಂಗ್‌ ನಡೆಯಲಿದೆ. ಹಾಗಾಗಿ, ಅವರು ಒಂದು ದಿನದ ಶೂಟಿಂಗ್‌ಗೆ ₹ 20.50 ಕೋಟಿ ಸಂಭಾವನೆ ಪಡೆಯಲಿದ್ದಾರೆ. ಸಂಚಿಕೆಯ ಲೆಕ್ಕದಲ್ಲಿ ಅವರು ಪ್ರತಿ ಸಂಚಿಕೆಗೆ ಪಡೆಯುವ ಸಂಭಾವನೆ ಮೊತ್ತ ₹ 10.25 ಕೋಟಿ.

ಪ್ರತಿವರ್ಷದ ಸೆಪ್ಟೆಂಬರ್‌ನಲ್ಲಿ ಬಿಗ್‌ಬಾಸ್‌ ಸೀಸನ್‌ ಶುರುವಾಗುತ್ತಿತ್ತು. ಕೋವಿಡ್‌–19 ಪರಿಣಾಮ ಈ ಬಾರಿ ವಿಳಂಬವಾಗಿದೆ. ಮುಂಬೈನಲ್ಲಿ ಬಿಗ್‌ಬಾಸ್‌ಗಾಗಿಯೇ ಫಿಲ್ಮ್‌ಸಿಟಿಯ ನಿರ್ಮಾಣ ನಡೆಯುತ್ತಿದ್ದು, ಇದಕ್ಕೆ ಮಳೆ ಅಡ್ಡಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT