ಭಾನುವಾರ, ಆಗಸ್ಟ್ 1, 2021
26 °C
ಟ್ರೋಲಿಗರಿಗೆ ಟಾಂಗ್‌ ಕೊಟ್ಟ ಸಲ್ಲು

ಕೆಸರು ಗದ್ದೆಯಲ್ಲಿ ಟ್ರ್ಯಾಕ್ಟರ್‌ ಓಡಿಸಿದ ಸಲ್ಮಾನ್‌ ಖಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಲಾಕ್‌ಡೌನ್‌ನ ಆರಂಭದಿಂದಲೂ ತಮ್ಮದೇ ಫಾರ್ಮ್‌ಹೌಸ್‌ನಲ್ಲಿ ಕಾಲದೂಡುತ್ತಿರುವುದು ಹಳೆಯ ಸುದ್ದಿ. ಅಲ್ಲಿಂದಲೇ ಅವರು ಅಭಿಮಾನಿಗಳೊಟ್ಟಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂವಾದ ನಡೆಸುತ್ತಿದ್ದಾರೆ. ಫೋಟೊ, ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. 

ಕೆಲವು ದಿನಗಳ ಹಿಂದೆ ಅವರು ಗದ್ದೆಯಲ್ಲಿ ನಾಟಿ ಮಾಡುತ್ತಿರುವ ಫೋಟೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದರು. ಮತ್ತೊಮ್ಮೆ ಮೈ–ಕೈಗೆಲ್ಲ ಕೆಸರು ಮೆತ್ತಿಕೊಂಡಿರುವ ಫೋಟೊವನ್ನೂ ಹಂಚಿಕೊಂಡಿದ್ದರು. ಇದಕ್ಕೆ ಅವರು ‘ಎಲ್ಲಾ ಅನ್ನದಾತರನ್ನು ನಾನು ಗೌರವಿಸುವೆ’ ಎಂಬ ಕ್ಯಾಪ‍್ಷನ್ ನೀಡಿದ್ದರು. ಈ ಫೋಟೊ ಸಖತ್‌ ವೈರಲ್‌ ಆಗಿತ್ತು. ಅಷ್ಟೇ ಟ್ರೋಲ್‌ ಕೂಡ ಆಗಿತ್ತು.

‘ಸಲ್ಲುಗೆ ಕೃಷಿ ಏನೆಂಬುದೇ ಗೊತ್ತಿಲ್ಲ. ಅವರಿಗೆ ವ್ಯವಸಾಯ ಮಾಡುವುದು ಬರುವುದಿಲ್ಲ. ಬರೀ ನಾಟಕವಾಡುತ್ತಿದ್ದಾರೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನರು ಕಾಲೆಳೆದಿದ್ದರು. ಆದರೆ, ಇದಕ್ಕೆ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಈಗ ವಿಡಿಯೊ ಮೂಲಕ ತನಗೂ ಕೃಷಿಯ ಬಗ್ಗೆ ಜ್ಞಾನವಿದೆ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಕೆಸರು ಗದ್ದೆಯಲ್ಲಿ ಟ್ರ್ಯಾಕ್ಟರ್‌ ಓಡಿಸುವ ವಿಡಿಯೊವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸಲ್ಲು ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೂ 25 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೊವನ್ನು ವೀಕ್ಷಿಸಿದ್ದು,  ಕೆಲವರು ವಿಭಿನ್ನವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಸಲ್ಲು ಮತ್ತು ದಿಶಾ ಪಟಾನಿ ನಟನೆಯ ‘ರಾಧೇ’ ಚಿತ್ರದ ಹಾಡಿನ ಶೂಟಿಂಗ್‌ ಅಷ್ಟೇ ಬಾಕಿಯಿದೆ. ಈ ಸಿನಿಮಾ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದಾದ ಬಳಿಕ ಅವರು ‘ಕಭೀ ಈದ್‌ ಕಭೀ ದೀವಾಳಿ’ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಕನ್ನಡತಿ ಪೂಜಾ ಹೆಗ್ಡೆ ಈ ಚಿತ್ರದ ನಾಯಕಿ.

 
 
 
 

 
 
 
 
 
 
 
 
 

Farminggg

Salman Khan (@beingsalmankhan) ರಿಂದ ಹಂಚಲಾದ ಪೋಸ್ಟ್ ಅವರು ರಂದು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು