ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಧೆ’ ಪೈರಸಿ ಪ್ರತಿ ವೀಕ್ಷಿಸಿದವರ ಮೇಲೂ ಕ್ರಮ: ಸಲ್ಮಾನ್‌

Last Updated 16 ಮೇ 2021, 12:30 IST
ಅಕ್ಷರ ಗಾತ್ರ

ಮುಂಬೈ: ‘ರಾಧೆ’ ಚಿತ್ರದ ನಕಲಿ ಪ್ರತಿಯನ್ನು ಜಾಲತಾಣಗಳಲ್ಲಿ ವೀಕ್ಷಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ನಟ ಸಲ್ಮಾನ್‌ ಖಾನ್‌ ಎಚ್ಚರಿಸಿದ್ದಾರೆ.

ಪೈರಸಿ ತಾಣಗಳಲ್ಲಿ ‘ರಾಧೆ’ ಚಿತ್ರ ಸೋರಿಕೆಯಾದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸಲ್ಮಾನ್‌, ‘ಹಾಗೆ ಸೋರಿಕೆ ಮಾಡಿದವರ ವಿರುದ್ಧಸೈಬರ್‌ ಪೊಲೀಸರಿಗೆ ದೂರು ನೀಡಲಾಗಿದೆ. ನಕಲಿ ಜಾಲತಾಣಗಳ ಮೂಲಕ ಪ್ರಸಾರವಾಗುತ್ತಿರುವ ಚಿತ್ರವನ್ನು ವೀಕ್ಷಿಸುವುದು ಗಂಭೀರ ಅಪರಾಧ’ ಎಂದೂ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಎಚ್ಚರಿಸಿದ್ದಾರೆ.

‘ರಾಧೆ’ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿತ್ತು. ಕೋವಿಡ್‌ ಕಾರಣದಿಂದಾಗಿ ಚಿತ್ರವನ್ನು ಝೀ5 ಹಾಗೂ ಝೀ ಪ್ಲೆಕ್ಸ್‌ ಒಟಿಟಿ ವೇದಿಕೆಗಳಲ್ಲಿ ಮತ್ತು ಡಿಟಿಎಚ್‌ನಲ್ಲಿ ನೋಡಲು ಪ್ರತಿ ವೀಕ್ಷಣೆಗೆ ₹ 249 ದರ ನಿಗದಿ ಮಾಡಲಾಗಿತ್ತು. ಆದರೆ, ಚಿತ್ರವನ್ನು ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ ಅದರ ನಕಲಿ ಪ್ರತಿ ಆನ್‌ಲೈನ್‌ ತಾಣಗಳಲ್ಲಿ ಚಿತ್ರ ಹರಿದಾಡತೊಡಗಿತ್ತು.

ಈ ಬಗ್ಗೆ ಬೇಸರದಿಂದ ನುಡಿದಿರುವ ಸಲ್ಮಾನ್‌, ‘ಚಿತ್ರ ನಿರ್ಮಾಣಕ್ಕೆ ಮಾಡಲು ಹಲವಾರು ಜನರ ಶ್ರಮ ಬೇಕಾಗುತ್ತದೆ ಮತ್ತು ಅಂತಿಮವಾಗಿ ಚಿತ್ರವನ್ನು ವೀಕ್ಷಿಸಲು ಕೆಲವರು ಪೈರಸಿ ಮಾರ್ಗ ತೆಗೆದುಕೊಂಡಾಗ ಅದು ತುಂಬಾ ನೋವುಂಟು ಮಾಡುತ್ತದೆ’

ಅಭಿಮಾನಿಗಳು ಸರಿಯಾದ ವೇದಿಕೆಯಲ್ಲಿ ಚಿತ್ರ ವೀಕ್ಷಿಸಬೇಕು. ಅದಕ್ಕೆ ಎಲ್ಲರ ಬದ್ಧತೆ ಬಯಸುತ್ತೇನೆ. ಮನೋರಂಜನಾ ಕ್ಷೇತ್ರದಲ್ಲಿ ಪೈರಸಿ ಬರಬಾರದು ಎಂದು ಅವರು ಹೇಳಿದ್ದಾರೆ.

‘ರಾಧೆ’ ಚಿತ್ರದಲ್ಲಿ ದಿಶಾ ಪಟಾನಿ, ರಣದೀಪ್ ಹೂಡಾ, ಜಾಕಿ ಶ್ರಾಫ್, ಮತ್ತು ಗೌತಮ್ ಗುಲಾಟಿ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT