ವೈವಾಹಿಕ ಬದುಕಿಗೆ ಅಡಿಯಿಟ್ಟ ಬಳಿಕ ಬಹುತೇಕ ನಟಿಯರು ತೆರೆಮರೆಗೆ ಸರಿದು ಬಿಡುತ್ತಾರೆ. ಇನ್ನೊಂದೆಡೆ ಅಂತಹವರಿಗೆ ನಿರ್ಮಾಪಕರು ಮಣೆ ಹಾಕುವುದು ಕಡಿಮೆ. ಆದರೆ ಕೆಲವರದ್ದು ಚಿತ್ರ ನಿರ್ಮಾಣ, ವಿತರಣೆಯ ಕಾರ್ಯದಲ್ಲಿ ತೊಡಗಿಸಿಕೊಂಡು ಸಿನಿಮಾದೊಂದಿಗೆ ನಂಟು ಉಳಿಸಿಕೊಳ್ಳುವ ಒಂಟಿ ಕಾಲಿನ ಸರ್ಕಸ್.

ವಿವಾಹದ ನಂತರವೂ ನಟನೆಯ ಚಾಪು ಉಳಿಸಿಕೊಳ್ಳುವ ನಟಿಯರ ಸಂಖ್ಯೆ ವಿರಳ. ಅಂತಹವರಲ್ಲಿ ನಟಿ ಸಮಂತಾ ಅಕ್ಕಿನೇನಿ ಕೂಡ ಒಬ್ಬರು. ಮದುವೆಯ ಬಳಿಕವೂ ಸಮಂತಾ ಟಾಲಿವುಡ್ನಲ್ಲಿ ಇಂದಿಗೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಮತ್ತೊಂದೆಡೆ ಅವರ ಸಂಭಾವನೆಯ ಗ್ರಾಫ್ ಕೂಡ ಏರಿಕೆಯಾಗಿರುವುದು ವಿಶೇಷ. ಈ ತಿಂಗಳ ಮೊದಲ ವಾರ ತೆರೆಕಂಡ ಅವರು ಮುಖ್ಯಭೂಮಿಕೆಯಲ್ಲಿರುವ ಮಹಿಳಾ ಪ್ರಧಾನ ಕಥಾವಸ್ತು ಹೊಂದಿರುವ ‘ಓ ಬೇಬಿ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಜೋರಾಗಿ ಸದ್ದು ಮಾಡಿದೆ. ಇದು ಕೋರಿಯನ್ ಚಿತ್ರ ‘ಮಿಸ್ ಗ್ರಾನಿ’ಯ ರಿಮೇಕ್.

ತನ್ನೊಳಗಿನ ನಟನಾ ಸಾಮರ್ಥ್ಯದ ಮೂಲಕ ಸಿನಿಮಾ ಗೆಲ್ಲಿಸುವ ಶಕ್ತಿ ತನಗಿದೆ ಎನ್ನುವುದನ್ನು ಆಕೆ ‘ಓ ಬೇಬಿ’ಯ ಮೂಲಕ ಸಾಬೀತುಪಡಿಸಿದ್ದಾರೆ.

‘ಮಿಸ್ ಗ್ರಾನಿ’ ಚಿತ್ರ ವಿಶ್ವದ ಹಲವು ಭಾಷೆಗಳಿಗೆ ರಿಮೇಕ್ ಆಗಿದೆ. ಎಲ್ಲಾ ಭಾಷೆಯಲ್ಲೂ ಇದು ಯಶಸ್ಸು ಗಳಿಸಿದೆ. ತೆಲುಗಿನಲ್ಲಿ ಈ ಚಿತ್ರ ನಿರ್ದೇಶಿಸಿದ್ದು, ನಂದಿನಿ ರೆಡ್ಡಿ.

ಸಿನಿಮಾದ ಗೆಲುವಿನ ನಡುವೆಯೇ ಸಮಂತಾ ಅವರು ನಂದಿನಿ ರೆಡ್ಡಿ ಜೊತೆಗೆ ಮತ್ತೊಂದು ಸಿನಿಮಾದಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದಾರೆ. ನಟನೆಯ ಸಾಮರ್ಥ್ಯ ಬೇಡುವ ಪಾತ್ರಗಳಲ್ಲಿ ನಟಿಸಲು ಆಕೆಗೆ ಇಷ್ಟವಂತೆ. ಸಿದ್ಧ ಮಾದರಿಯ ಕಮರ್ಷಿಯಲ್ ಸಿನಿಮಾಗಳಲ್ಲಿ ಅಭಿನಯಿಸಲು ನನಗಿಷ್ಟವಿಲ್ಲ ಎಂದು ಕಡ್ಡಿಮುರಿದಂತೆ ಹೇಳುತ್ತಾರೆ ‘ರಂಗಸ್ಥಲಂ’ ಚಿತ್ರದ ಈ ಸುಂದರಿ.

ಸಮಂತಾ ಚಿತ್ತ ಮತ್ತೆ ರಿಮೇಕ್ ಚಿತ್ರದತ್ತ ಹೊರಳಿರುವುದಂತು ದಿಟ. ಫ್ರೆಂಚ್ ಸಿನಿಮಾದ ರಿಮೇಕ್ನಲ್ಲಿ ನಟಿಸಲು ಅವರ ಉತ್ಸುಕರಾಗಿದ್ದಾರೆ ಎನ್ನುವುದು ಹೊಸ ಸುದ್ದಿ. ಈ ಚಿತ್ರಕ್ಕೂ ನಂದಿನಿ ರೆಡ್ಡಿ ಅವರೇ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.