ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಂದರ್ಯ ಮಾಸಿದೆ ಎಂಬ ಟ್ವೀಟ್‌ಗೆ ತಕ್ಕ ಉತ್ತರ ಕೊಟ್ಟ ನಟಿ ಸಮಂತಾ

Last Updated 10 ಜನವರಿ 2023, 7:23 IST
ಅಕ್ಷರ ಗಾತ್ರ

ಬೆಂಗಳೂರು: ಮಯೋಸೈಟಿಸ್ ಸಮಸ್ಯೆಗೆ ತುತ್ತಾಗಿ ಕೆಲ ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ನಟಿ ಸಮಂತಾ ರುತ್ ಪ್ರಭು ತಮ್ಮ ಕುರಿತಾಗಿ ಮಾಡಲಾಗಿರುವ ಸಂವೇದನಾರಹಿತ ಟ್ವೀಟ್‌ಗಳಿಗೆ ತಿರುಗೇಟು ನೀಡಿದ್ದಾರೆ.

ಸೋಮವಾರ ತಮ್ಮ ಮುಂದಿನ ಚಿತ್ರ ‘ಶಾಕುಂತಲಾ‘ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಆ ಬಳಿಕ ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

‘ಸಮಂತಾ ಅವರ ಬಗ್ಗೆ ದುಃಖವಾಗುತ್ತಿದೆ. ಅವರು ಈಗ ತಮ್ಮ ಎಲ್ಲ ಲಾವಣ್ಯ ಮತ್ತು ಹೊಳಪನ್ನು ಕಳೆದುಕೊಂಡಿದ್ದಾರೆ. ವಿಚ್ಛೇದನದ ಬಳಿಕ ಅವರು ಅತ್ಯಂತ ಬಲಿಷ್ಠವಾಗಿ ತಮ್ಮ ವೃತ್ತಿಜೀವನಕ್ಕೆ ಹಿಂದಿರುಗಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಮಯೋಸೈಟಿಸ್ ಅವರಿಗೆ ಆಘಾತ ನೀಡಿದೆ’ ಎಂದು ಬರೆದಿದ್ದ ಟ್ವೀಟ್ ಒಂದನ್ನು ಹಂಚಿಕೊಂಡಿರುವ ಸಮಂತಾ, ನನ್ನ ರೀತಿ ನೀವು ಎಂದಿಗೂ ತಿಂಗಳುಗಟ್ಟಲೆ ವೈದ್ಯಕೀಯ ಚಿಕಿತ್ಸೆಗೆ ಹೋಗದಿರಲಿ ಎಂದು ಪ್ರಾರ್ಥಿಸುತ್ತೇನೆ. ನಿಮ್ಮ ಹೊಳಪು ಹೆಚ್ಚಿಸಲು ನನ್ನಿಂದ ಸ್ವಲ್ಪ ಪ್ರೀತಿ ಸ್ವೀಕರಿಸಿ ಎಂದು ಬರೆದಿದ್ದಾರೆ.

ಅಲ್ಲದೆ, ಚಿತ್ರದ ಟ್ರೇಲರ್ ಬಿಡುಗಡೆ ಚಿತ್ರವನ್ನು ಹಂಚಿಕೊಂಡಿರುವ ಅವರು, ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.

ಸಮಂತಾ ರುತ್ ಪ್ರಭು ಅವರು 'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸೀರಿಸ್ ಮೂಲಕ ಡಿಜಿಟಲ್ ವೇದಿಕೆಗೆ ಅಡಿ ಇಟ್ಟಿದ್ದರು. ಇದರಲ್ಲಿ ಶ್ರೀಲಂಕಾದ ತಮಿಳು ವಿಮೋಚನಾ ಹೋರಾಟಗಾರ್ತಿ ರಾಜಿ ಪಾತ್ರದ ಮೂಲಕ ಸಮಂತಾ ಗಮನ ಸೆಳೆದಿದ್ದರು. ರುಸ್ಸೋ ಬ್ರದರ್ಸ್ ಅವರ ಸಿಟಾಡೆಲ್‌ನಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಕಳೆದ ವರ್ಷ ವಿಜಯ್ ಸೇತುಪತಿ ಮತ್ತು ನಯನತಾರಾ ಜೊತೆಗಿನ ‘ಕಾತುವಾಕುಲ ರೆಂಡು ಕಾದಲ್‘ ಮತ್ತು ‘ಯಶೋಧಾ‘ ಚಿತ್ರಗಳ ಮೂಲಕ ಸಮಂತಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.

ಸಮಂತಾ ಅಭಿನಯದ, ಮಹಾಭಾರತದ ಕಥಾಧರಿತ ಸಿನಿಮಾ ‘ಶಾಕುಂತಲಾ’ ಫೆಬ್ರುವರಿ 17ಕ್ಕೆ ತೆರೆ ಕಾಣಲಿದೆ.

ಸಮಂತಾ ಸದ್ಯದಲ್ಲೇ ಫಿಲಿಪ್ ಜಾನ್ ನಿರ್ದೇಶನದ 'ಅರೇಂಜ್‌ಮೆಂಟ್ಸ್ ಆಫ್ ಲವ್' ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT