ಗುರುವಾರ , ಮಾರ್ಚ್ 30, 2023
24 °C

ಮೇಕಪ್ ಇಲ್ಲದ ಫೋಟೊ ಹಂಚಿಕೊಂಡ ನಟಿ ಸಮಂತಾ ಅಕ್ಕಿನೇನಿ; ರಾಶಿ ಖನ್ನಾ ಪ್ರತಿಕ್ರಿಯೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ದಕ್ಷಿಣ ಭಾರತದ ನಟಿ ಸಮಂತಾ ಅಕ್ಕಿನೇನಿ ತನ್ನ ತಾಯಿ ನಿನೆಟ್ಟೆ ಪ್ರಭು ಕ್ಲಿಕ್ಕಿಸಿರುವ ಮೇಕಪ್ ಇಲ್ಲದ ಫೋಟೊವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಇತರೆ ನಟಿಯರು ಸೇರಿದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫೋಟೋದಲ್ಲಿ, ನೀಲಿ ಬಣ್ಣದ ಬಟ್ಟೆಯನ್ನು ಧರಿಸಿರುವ ಸಮಂತಾ, ತನ್ನ ತಾಯಿಗೆ ಪೋಸ್ ನೀಡುವುದನ್ನು ಕಾಣಬಹುದು. ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನಟಿ ರಾಶಿ ಖನ್ನಾ ಕೂಡ ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಮಂತಾ ಅಕ್ಕಿನೇನಿ ಇತ್ತೀಚೆಗಷ್ಟೇ ತಮ್ಮ ಮುಂಬರುವ ಪೌರಾಣಿಕ ಸಿನಿಮಾ ‘ಶಾಕುಂತಲಂ’ ಚಿತ್ರದ ಚಿತ್ರೀಕರಣವನ್ನು ಹೈದರಾಬಾದ್‌ನಲ್ಲಿ ಪುನರಾರಂಭಿಸಿದ್ದಾರೆ. ಶಾಕುಂತಲಾ ಮತ್ತು ರಾಜ ದುಷ್ಯಂತನ ಕಥೆಯನ್ನು ಆಧರಿಸಿದ, ಗುಣಶೇಖರ್‌ ನಿರ್ದೇಶನದ ಚಿತ್ರ ಇದಾಗಿದೆ. ಸಮಂತಾ ಶೀಘ್ರದಲ್ಲೇ ತಮ್ಮ ಇತರ ಚಿತ್ರಗಳ ಶೂಟಿಂಗ್ ಅನ್ನು ಕೂಡ ಪುನರಾರಂಭಿಸಲಿದ್ದಾರೆ.

ಫೋಟೊ ಕ್ಲಿಕ್ಕಿಸಿದ್ದು 'ನನ್ನ ಪ್ರೀತಿಯ ಅಮ್ಮ' ಎಂದು ಹೃದಯ ಮತ್ತು ಸೂರ್ಯನ ಎಮೋಜಿಯೊಂದಿಗೆ ಸಮಂತಾ ಫೋಟೊವನ್ನು ಹಂಚಿಕೊಂಡಿದ್ದಾರೆ.

ಸಮಂತಾ ಫೋಟೋ ಹಂಚಿಕೊಂಡ ಕೂಡಲೇ, ಅವರ ಸ್ನೇಹಿತರು ಮತ್ತು ಅಭಿಮಾನಿಗಳು ಕಮೆಂಟ್‌ಗಳ ಸುರಿಮಳೆಗೈದಿದ್ದಾರೆ. ನಟಿ ರಾಶಿ ಖನ್ನಾ 'ತುಂಬಾ ಸುಂದರವಾಗಿದೆ' ಎಂದು ಹೃದಯದ ಎಮೋಜಿಯೊಂದಿಗೆ ಕಮೆಂಟಿಸಿದ್ದಾರೆ.

ಇದನ್ನೂ ಓದಿ: 

ನಿರ್ದೇಶಕ ರಾಜ್ ನಿಡಿಮೋರು ಅವರ 'ದಿ ಫ್ಯಾಮಿಲಿ ಮ್ಯಾನ್ 2' ಸಿನಿಮಾದಲ್ಲಿ ಸಮಂತಾ ಕಾಣಿಸಿಕೊಂಡಿದ್ದರು. ಶೀಘ್ರದಲ್ಲೇ ವಿಘ್ನೇಶ್ ಶಿವನ್ ಅವರ 'ಕಾತುವಾಕುಲ ರೆಂಡು ಕಾದಲ್' ಚಿತ್ರದಲ್ಲಿ ನಟಿಸಲಿದ್ದು, ಇದರಲ್ಲಿ ವಿಜಯ್ ಸೇತುಪತಿ ಮತ್ತು ನಯನತಾರಾ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು