ಸೋಮವಾರ, ಮಾರ್ಚ್ 27, 2023
32 °C

ದಸರಾ ಬಳಿಕ ಶೂಟಿಂಗ್‌ಗೆ ತೆರಳಲಿರುವ ಸಮಂತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಕಾರಣದಿಂದ ಒಂದಿಷ್ಟು ದಿನಗಳ ಕಾಲ ಶೂಟಿಂಗ್‌ನಿಂದ ಬಿಡುವು ಪಡೆದಿದ್ದ ನಟ–ನಟಿಯರು ಈಗ ಮರಳಿ ಶೂಟಿಂಗ್‌ನಲ್ಲಿ ಭಾಗವಹಿಸುವ ಯೋಚನೆಯಲ್ಲಿದ್ದಾರೆ. ನಟಿ ಸಮಂತಾ ತಾವು ದಸರಾ ಹಬ್ಬದ ಬಳಿಕ ಶೂಟಿಂಗ್‌ನಲ್ಲಿ ಭಾಗವಹಿಸುವುದಾಗಿ ಹೇಳಿಕೊಂಡಿದ್ದಾರೆ. 

ಈ ವರ್ಷದ ಫೆಬ್ರುವರಿಯಲ್ಲಿ ಬಿಡುಗಡೆಯಾದ ‘ಜಾನು’ ಸಿನಿಮಾದ ಬಳಿಕ ಸಮಂತಾ ಯಾವುದೇ ಸಿನಿಮಾದ ಶೂಟಿಂಗ್‌ನಲ್ಲಿ ಭಾಗವಹಿಸಿರಲಿಲ್ಲ. 

‘ದಿ ಫ್ಯಾಮಿಲಿ ಮ್ಯಾನ್’ ವೆಬ್‌ ಸಿರೀಸ್‌ಗಾಗಿ ಕ್ಯಾಮೆರಾ ಮುಂದೆ ನಿಂತಿದ್ದು ಬಿಟ್ಟರೆ ಯಾವುದೇ ಚಲನಚಿತ್ರದ ಶೂಟಿಂಗ್ ಮಾಡಿರಲಿಲ್ಲ.

ಈ ಲಾಕ್‌ಡೌನ್ ಅವಧಿಯಲ್ಲಿ ಅರ್ಬನ್‌ ಫಾರ್ಮಿಂಗ್‌, ಯೋಗ ಮುಂತಾದ ಹೊಸ ಹವ್ಯಾಸಗಳನ್ನು ರೂಢಿಸಿಕೊಂಡಿದ್ದರು ಈ ಬೆಡಗಿ. ಈ ಹವ್ಯಾಸಗಳೊಂದಿಗೆ ದಿನ ಕಳೆಯುತ್ತಿದ್ದ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿದ್ದರು.

ಇಂತಿಪ್ಪ ಸಮಂತಾ ದಸರಾ ಮುಗಿದ ಬಳಿಕ ಶೂಟಿಂಗ್‌ನಲ್ಲಿ ಭಾಗವಹಿಸುತ್ತಾರಂತೆ. ದಸರಾ ನಂತರ ಕೊರೊನಾ ಸೋಂಕು ಕಡಿಮೆಯಾಗಬಹುದು ಎಂಬ ಯೋಚನೆ ಇವರದ್ದಿರಬಹುದು.

ಅಶ್ವಿನ್ ಸರವಣ್ ನಿರ್ದೇಶನದ ಪ್ಯಾನ್ ಇಂಡಿಯಾ ಹಾಗೂ ನಯನತಾರಾ ನಟಿಯಾಗಿರುವ ತಮಿಳಿನ ಹಾಸ್ಯಪ್ರಧಾನ ಚಿತ್ರಗಳಿಗೆ ಸಮಂತಾ ಸಹಿ ಹಾಕಿದ್ದಾರೆ. ಈ ಚಿತ್ರಗಳ ಶೂಟಿಂಗ್‌ ಆರಂಭಿಸಬೇಕಿದೆ.

ಸಮಂತಾ ಪತಿ ನಾಗಚೈತನ್ಯ ಕೂಡ ಕೊರೊನಾ ನಿಯಂತ್ರಣಕ್ಕೆ ಕಾಯುತ್ತಿದ್ದಾರೆ. ಶೇಖರ್ ಕಮ್ಮುಲಾ ನಿರ್ದೇಶನದ ‘ಲವ್‌ಸ್ಟೋರಿ’ ಚಿತ್ರದಲ್ಲಿ ನಾಗಚೈತನ್ಯ ನಟಿಸುತ್ತಿದ್ದು ಶೂಟಿಂಗ್ ಅರ್ಧಕ್ಕೆ ನಿಂತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು