ನಟಿ ಸಮೀರಾ ರೆಡ್ಡಿಯ ಹೆಸರು ಕೇಳಿದಾಕ್ಷಣ ಸುದೀಪ್ ನಟನೆಯ ‘ವರದನಾಯಕ’ ಚಿತ್ರ ನೆನಪಾಗುತ್ತದೆ. ಇದರಲ್ಲಿ ಕಿಚ್ಚನಿಗೆ ನಾಯಕಿಯಾಗಿದ್ದು ಆಕೆಯೇ. ಇದು ತೆರೆಕಂಡಿದ್ದು 2013ರಲ್ಲಿ. ಇದಾದ ಬಳಿಕ ಆಕೆ ಕನ್ನಡ ಯಾವೊಂದು ಸಿನಿಮಾದಲ್ಲೂ ನಟಿಸಲಿಲ್ಲ. ತೆಲುಗು, ತಮಿಳು, ಮಲಯಾಳದ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದರೂ ಆಕೆ ಹೆಚ್ಚಾಗಿ ಬಣ್ಣಹಚ್ಚಿದ್ದು ಬಾಲಿವುಡ್‌ನಲ್ಲಿಯೇ.

ಮದುವೆಯಾದ ಬಳಿಕ ಬಣ್ಣದ ಜಗತ್ತಿನಿಂದ ಆಕೆ ದೂರವಿದ್ದಾರೆ. ಬಾಂಬೆ ಮೂಲದ ಈ ಬೆಡಗಿ ವೆಬ್‌ಸೈಟ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಟನೆಯ ವೇಳೆ ತಾನು ಅನುಭವಿಸಿದ ಸಂಕಷ್ಟಗಳ ಸರಮಾಲೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ‘ಪಾತ್ರಕ್ಕಾಗಿ ಪಲ್ಲಂಗ’ (ಕಾಸ್ಟಿಂಗ್ ಕೌಚ್)ದಿಂದ ತಾನು ಹೇಗೆ ಪಾರಾದೆ ಎಂಬುದನ್ನು ಹೇಳಿಕೊಂಡಿದ್ದಾರೆ.

ಅದೊಂದು ಸಿನಿಮಾದಲ್ಲಿ ಸಮೀರಾ ರೆಡ್ಡಿಯ ಗಮನಕ್ಕೆ ಬಾರದೆಯೇ ಕಿಸ್ಸಿಂಗ್ ದೃಶ್ಯ ಸೇರ್ಪಡೆಯಾಗಿದ್ದು ಆಕೆಗೆ ಆತಂಕ ತರಿಸಿತ್ತಂತೆ. ‘ನಾನು ಎಂದಿನಂತೆ ಶೂಟಿಂಗ್ ಸೆಟ್‌ಗೆ ಹೋದೆ. ತಕ್ಷಣವೇ ಈಗ ಕಿಸ್ಸಿಂಗ್ ದೃಶ್ಯದ ಶೂಟಿಂಗ್ ಇದೆ ಎಂದಾಗ ಶಾಕ್ ಆಯಿತು. ಒಪ್ಪಂದದ ಪ್ರಕಾರ ಕಿಸ್ಸಿಂಗ್ ದೃಶ್ಯ ಇರಲಿಲ್ಲ. ಆದರೆ, ನಿರ್ಮಾಪಕರು ಬಲವಂತವಾಗಿ ಆ ದೃಶ್ಯದಲ್ಲಿ ನಟಿಸುವಂತೆ ಹೇಳಿದರು. ಅವರು ನೀಡಿದ ಕಾರಣ ಕೇಳಿ ನನಗೆ ಮತ್ತಷ್ಟು ಗಾಬರಿಯಾಯಿತು’ ಎಂದಿದ್ದಾರೆ.

‘ಮುಸಾಫಿರ್’ ಚಿತ್ರದಲ್ಲಿ ನೀವು ಕಿಸ್ಸಿಂಗ್ ದೃಶ್ಯದಲ್ಲಿ ನಟಿಸಿಲ್ಲವೇ’ ಎಂದರು ನಿರ್ಮಾಪಕರು. ‘ಆಗ ನಾನು ನಟಿಸಿದ್ದೆ. ಈ ಸಿನಿಮಾದಲ್ಲಿ ನಟಿಸಲು ಇಷ್ಟವಿಲ್ಲ’ ಎಂದು ದಿಟ್ಟವಾಗಿಯೇ ಉತ್ತರಿಸಿದೆ. ಅದಕ್ಕೆ ನಿರ್ಮಾಪಕರು, ‘ನೀವು ಕಿಸ್ಸಿಂಗ್ ದೃಶ್ಯದಲ್ಲಿ ನಟಿಸಬೇಕು. ಇಲ್ಲವಾದರೆ ನಿಮ್ಮ ಪಾತ್ರಕ್ಕೆ ಬೇರೊಬ್ಬ ನಟಿಯನ್ನು ಕರೆತರುವುದು ಅನಿವಾರ್ಯ ಎಂದರು. ಸಿನಿಮಾಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುತ್ತವೆ’ ಎಂದಿದ್ದಾರೆ ಸಮೀರಾ ರೆಡ್ಡಿ. ಆದರೆ, ಆ ಸಿನಿಮಾ ಯಾವುದೇಂದು ಬಹಿರಂಗಪಡಿಸಿಲ್ಲ.

ಆಕೆ ಮತ್ತೊಂದು ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ‘ಸೆಟ್‌ನಲ್ಲಿ ನಟನೊಬ್ಬ ನನಗೆ ಬೋರ್ ಆಗುತ್ತಿದೆ. ನನ್ನೊಟ್ಟಿಗೆ ಕಾಲ ಕಳೆಯುವಂತೆ ಬಾ... ಎಂದು ಕರೆದ. ನೀನು ಬರದೇ ಇದ್ದರೆ ನಿನ್ನೊಟ್ಟಿಗೆ ಮತ್ತೆ ನಾನು ಕೆಲಸ ಮಾಡುವುದಿಲ್ಲ ಎಂದ. ಚಿತ್ರರಂಗದಲ್ಲಿ ಹಾವು– ಏಣಿಯಾಟ ಇರುವುದು ಸಹಜ. ಹಾವುಗಳ ನಡುವೆ ಹೇಗೆ ಸಂಚರಿಸಬೇಕು ಎಂಬುದು ನಿಮಗೆ ಗೊತ್ತಿರಬೇಕು. ನಿಮ್ಮದೇ ದಾರಿಯಲ್ಲಿ ನಡೆಯುವುದನ್ನೂ ಕಲಿತುಕೊಳ್ಳಬೇಕು. ನಾನು ಆ ನಟನ ಮಾತಿಗೆ ಸೊಪ್ಪು ಹಾಕಲಿಲ್ಲ. ಆ ಘಟನೆಯ ಬಳಿಕ ಮತ್ತೆ ಆ ಶೂಟಿಂಗ್‌ನಲ್ಲಿ ಭಾಗವಹಿಸಲಿಲ್ಲ. ನೇರವಾಗಿ ಮನೆಗೆ ಬಂದು ಟಿ.ವಿ ವೀಕ್ಷಿಸುತ್ತಾ ಕುಳಿತುಬಿಟ್ಟೆ. ಚಿತ್ರರಂಗದಿಂದ ನನಗೆ ಸಾಕಷ್ಟು ಸಹಾಯವಾಗಿದೆ. ಆದರೆ, ಬಣ್ಣದಲೋಕದಲ್ಲಿ ಇಂತಹ ವ್ಯವಹಾರದ ಸ್ವರೂಪವೂ ಇರುತ್ತದೆ’ ಎಂದು ಹೇಳಿಕೊಂಡಿದ್ದಾರೆ.

ಆದರೆ, ಆ ಸಿನಿಮಾ ಮತ್ತು ನಟನ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.