ಶನಿವಾರ, ಡಿಸೆಂಬರ್ 3, 2022
21 °C

ವೈರಲ್‌ ಆಗುತ್ತಿದ್ದೆ ಸಂಚಾರಿ ವಿಜಯ್‌ ಆ್ಯನಿಮೇಟೆಡ್‌ ವಿಡಿಯೊ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಿವಂಗತ ನಟ ಸಂಚಾರಿ ವಿಜಯ್ ಅವರು ನಟಿಸಿರುವ ‘ಪುಕ್ಸಟ್ಟೆ ಲೈಫು ಪುರ್‌ಸೊತ್ತೇ ಇಲ್ಲ’ ಚಿತ್ರ ಇದೇ 24ರಂದು ತೆರೆಯ ಮೇಲೆ ಬರುತ್ತಿದ್ದು, ಇದೇ ಸಂದರ್ಭದಲ್ಲಿ ಚಿತ್ರತಂಡವು ವಿಜಯ್‌ ಅವರ ಆ್ಯನಿಮೇಟೆಡ್‌ ವಿಡಿಯೊವೊಂದರ ಮುಖಾಂತರ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಹ್ವಾನಿಸಿದೆ. 

ಆ್ಯನಿಮೇಟೆಡ್‌ ವಿಡಿಯೊದಲ್ಲಿ ದಿವಂಗತ ನಟರಾದ ರಾಜ್‌ಕುಮಾರ್‌, ಶಂಕರ್‌ನಾಗ್‌, ವಿಷ್ಣುವರ್ಧನ್‌, ಅಂಬರೀಷ್‌ ಸೇರಿ ಹಲವು ಕಲಾವಿದರ ಜೊತೆ ವಿಜಯ್‌ ಮಾತುಕತೆ ನಡೆಸುತ್ತಾ ತಮ್ಮ ಹೊಸ ಚಿತ್ರದ ಬಗ್ಗೆ ವಿವರಿಸುವ ದೃಶ್ಯವಿದೆ. ಈ ವಿಡಿಯೊ ಮುಖಾಂತರ ವಿಜಯ್‌ ಅವರನ್ನು ಹಲವರು ನೆನಪಿಸಿಕೊಂಡಿದ್ದಾರೆ. ‘ಈ ವಿಡಿಯೊ ನೋಡಿ ಯಾಕೋ ಮನಸ್ಸು ಭಾರವಾಯ್ತು. ವಿಜಯ್‌ ತುಂಬಾ ಉತ್ಸಾಹದಿಂದ ತೊಡಗಿಸಿಕೊಂಡಿದ್ದ ಸಿನಿಮಾ ಇದು. ಅನೇಕ ಸಲ ಈ ಸಿನಿಮಾ ಕುರಿತು ಮಾತನಾಡಿದ್ದ ವಿಜಯ್‌ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಇಂದು ಅವರು ನಮ್ಮ ಜೊತೆ ಇಲ್ಲ ಎನ್ನುವುದು ಕಷ್ಟ’ ಎಂದು ನಿರ್ದೇಶಕ ಬಿ.ಎಸ್‌.ಲಿಂಗದೇವರು ಹೇಳಿದ್ದಾರೆ. 

‘ಪುಗ್ಸಟ್ಟೆ ಲೈಫು...’ ಅರವಿಂದ್ ಕುಪ್ಳೀಕರ್ ನಿರ್ದೇಶನದ ಚಿತ್ರವಾಗಿದ್ದು, ಈ ಚಿತ್ರದಲ್ಲಿ ವಿಜಯ್‌ಗೆ ಬೀಗ ರಿಪೇರಿ ಮಾಡುವ ಕಾಯಕದ ಶಹಜಹಾನ್ ಎಂಬ ಪಾತ್ರ. ಬೀಗ ರಿಪೇರಿಯಿಂದ ಬರುವ ಸಂಪಾದನೆ ಸಾಲದಾದಾಗ ಶಹಜಹಾನ್ ಈ ವ್ಯವಸ್ಥೆಯ ಚಕ್ರಸುಳಿಗೆ ಸಿಕ್ಕು ನಲುಗುವ ಅಪರೂಪದ ಕಥೆ ಇದಾಗಿದೆ. ವಿಜಯ್‌ಗೆ ಜೋಡಿಯಾಗಿ ಮಾತಂಗಿ ಪ್ರಸನ್ನ ನಟಿಸಿದ್ದಾರೆ. ಸುರೇಶ್ ಆರ್ಮುಗಂ ಸಂಕಲನ, ವಾಸು ದೀಕ್ಷಿತ್ ಸಂಗೀತ ನಿರ್ದೇಶನ, ಪೂರ್ಣಚಂದ್ರ ತೇಜಸ್ವಿಯವರ ಹಿನ್ನೆಲೆ ಸಂಗೀತ ಮತ್ತು ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ನಾಗರಾಜ್ ಸೋಮಯಾಜಿ ಚಿತ್ರದ ನಿರ್ಮಾಪಕರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು