ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಭಾಷೆಗಳಲ್ಲಿ ಕನ್ನಡದ 'ದಿ ಬರ್ತ್'

Last Updated 11 ಏಪ್ರಿಲ್ 2021, 6:37 IST
ಅಕ್ಷರ ಗಾತ್ರ

ಪ್ಯಾನ್‌ಇಂಡಿಯಾ ಸಿನಿಮಾ ಸಾಲಿಗೆ ಕನ್ನಡದ ಇನ್ನೊಂದು ಚಿತ್ರ ಸೇರುತ್ತಿದೆ. ‘ಬರ್ತ್‌’ ಚಿತ್ರದ ಹೆಸರು.ಶ್ರೀವಿನಾಯಕ ಮಾರುತಿ ಕ್ರಿಯೇಶನ್ಸ್ ಮತ್ತು ಲಕ್ಷ್ಯ ಪ್ರೊಡಕ್ಷನ್ಸ್ ಮೂಲಕ ಚಿತ್ರವು ಸಿದ್ದಗೊಂಡಿದೆ. ಸೆನ್ಸಾರ್ ಇನ್ನಷ್ಟೇ ಆಗಬೇಕಿದೆ.

ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಈ ಚಿತ್ರ ಮೂಡಿಬರಲಿದೆ.ವೈದ್ಯ ಡಾ.ವಿಕ್ರಂ ಅವರು ಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರದೀಪ್‌ಜೈನ್ ಚಿತ್ರದ ನಿರ್ಮಾಪಕರು.

ಹತ್ತು ಸಾವಿರ ವರ್ಷಗಳ ಹಿಂದೆ ಮನುಷ್ಯ ಯಾವ ರೀತಿ ಜೀವನ ನಡೆಸುತ್ತಿದ್ದ. ಮಾನವ ವಿಕಸನದ ಚಿತ್ರಣವನ್ನು ಹೇಳಲಿದೆ. ಪೂರ್ವ ಇತಿಹಾಸ, ಸಾಹಸ ಹೊಂದಿರುವ ಅಪರಿಚಿತ ವ್ಯಕ್ತಿಯ ಪುರಾಣ ಕತೆ. ಆತನ ಅನನ್ಯ ಪಯಣ, ಜೊತೆಗೆ ಅವನ ಬದುಕು ಮತ್ತು ಜೀವನದ ಶೋಧ ಹೇಗಿದೆ ಎಂಬುದು ಸಾರಾಂಶವಾಗಿದೆ. ಮೊದಲ ಹತ್ತು ನಿಮಿಷ ಪ್ರಸಕ್ತ ಕಾಲಘಟ್ಟದ ಮೂಲಕ ಪರಿಚಯಿಸಿ, ನಂತರ ಗತಕಾಲಕ್ಕೆ ಕರೆದುಕೊಂಡು ಹೋಗುತ್ತದೆ.

ಬದ್ರಿ ವರ್ಸಸ್ ಮಧುಮತಿ ಚಿತ್ರದಲ್ಲಿ ನಟಿಸಿದ್ದ ಪ್ರತಾಪ್‌ರಾಣಾ ನಾಯಕ. ಜೀವವನ್ನು ಪಣಕ್ಕೆ ಇಟ್ಟಂತೆ ಕಷ್ಟದ ಜಾಗಗಳಲ್ಲಿ ರಕ್ತ ಬರುವುದನ್ನು ಲೆಕ್ಕಿಸದೆ ಮಾತಿಲ್ಲದ ಅಸಂಸ್ಕ್ರತ ಮನುಷ್ಯನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪತ್ನಿಯಾಗಿ ಅನುಷಾ ರಮೇಶ್ ಹಾಗೂ ನಾಲ್ಕು ವರ್ಷದ ಮಗು ಪಾತ್ರಗಳು ಕಾಣಿಸಿಕೊಳ್ಳುತದೆ. ಸಂಗೀತ ಜ್ಯುಡ್ ಸ್ಯಾಂಡಿ, ಛಾಯಾಗ್ರಹಣ ಆನಂದ ಸುಂದರೇಶ, ಸಂಕಲನ ಮಹೇಶ್‌ತೋಗಟ, ಸಾಹಸ ರಮೇಶ್, ಸೌಂಡ್ ಡಿಸೈನ್ ರಾಷ್ಟ್ರ ಪ್ರಶಸ್ತಿ ವಿಜೇತ ಮಹಾವೀರ್ ಸಬಣ್ಣನವರ್ ಅವರದ್ದು. ಆಗುಂಬೆ, ಸಕಲೇಶಪುರ, ಹೊನ್ನಾವರ, ಯಾಣ, ಅಂಡಮಾನ್ ಹಾಗೂ ಮೇಘಾಲಯದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT