ಮಂಗಳವಾರ, ಡಿಸೆಂಬರ್ 7, 2021
23 °C

ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ ಕೋಟಿಗೊಬ್ಬ 3: ಕಲೆಕ್ಷನ್ ವಿವರ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ ಕಿಚ್ಚ ಸುದೀಪ್‌ ಅಭಿನಯದ ‘ಕೋಟಿಗೊಬ್ಬ 3’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡುತ್ತಿದೆ.

‘ಕೋಟಿಗೊಬ್ಬ 3’ ಒಂದು ದಿನ ತಡವಾಗಿ ಬಿಡುಗಡೆಯಾದರೂ ಹಣ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ.ಇದೀಗ ಚಿತ್ರದ ಗಳಿಕೆ ಬಗ್ಗೆ ನಟ ಕಿಚ್ಚ ಸುದೀಪ್ ಅವರೇ ಟ್ವಿಟರ್​ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಚಿತ್ರ ಬಿಡುಗಡೆಯಾದ ನಾಲ್ಕೇ ದಿನದಲ್ಲಿ ₹ 40.5 ಕೋಟಿಗೂ ಅಧಿಕ ಹಣವನ್ನು ಬಾಚಿಕೊಂಡಿದೆ.

ವಾರಾಂತ್ಯ ಹಾಗೂ ಸಾಲು ಸಾಲು ರಜೆಗಳಿದ್ದ ಪರಿಣಾಮ ‘ಕೋಟಿಗೊಬ್ಬ 3’ ಚಿತ್ರದ ಕಲೆಕ್ಷನ್ ಮತ್ತಷ್ಟು ಏರಿಕೆಯಾಗಿದೆ. ಈ ವಾರ ಕೂಡ ಚಿತ್ರ ಉತ್ತಮವಾಗಿ ಪ್ರದರ್ಶನ ಕಾಣುತ್ತಿದ್ದು, ಚಿತ್ರ ಇನ್ನಷ್ಟು ಗಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

‘ಕೋಟಿಗೊಬ್ಬ 3’ ಬಿಡುಗಡೆಯಾದ ಮೊದಲ ದಿನವೇ ಅಂದಾಜು ₹ 12 ಕೋಟಿಯಷ್ಟು ಗಳಿಸಿತ್ತು ಎಂದು ವರದಿಗಳು ಹರಿದಾಡಿದ್ದವು. ಪ್ರಸ್ತುತ ಚಿತ್ರತಂಡದಿಂದ ಅಧಿಕೃತ ಲೆಕ್ಕ ಬಿಡುಗಡೆಯಾಗಿದ್ದು, 4 ದಿನಕ್ಕೆ ₹ 40.5 ಕೋಟಿ ಗಳಿಸುವುದರೊಂದಿಗೆ ಯಶಸ್ಸು ಕಂಡಿದೆ.

ಇದನ್ನೂ ಓದಿ... ಕೋಟಿಗೊಬ್ಬ–3 ಚಿತ್ರ ವಿಮರ್ಶೆ: ಕೋಟಿ ಲೂಟಿಯ ಕಥನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು