ಕೆ.ಸದಾಶಿವ ಅವರ ಸಣ್ಣ ಕಥೆ ಆಧಾರಿತ ‘ಮತ್ತೆ ಮಳೆ ಹೊಯ್ಯುತ್ತಿದೆ’ ಚಿತ್ರದ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. ಪರಮ್ ಗುಬ್ಬಿ ನಿರ್ದೇಶನದ ಚಿತ್ರ ಎರಡು ಕಾಲಘಟ್ಟಗಳ ಪ್ರೇಮಕಥೆಯನ್ನು ಹೊಂದಿದೆ.

‘ಎಲ್ಲ ನೆನಪಾಗುತಿದೆ’ ಎಂಬ ಅಡಿಬರಹ ಚಿತ್ರಕ್ಕಿದೆ. ಶ್ರೀ ಗವಿರಂಗನಾಥ ಸ್ವಾಮಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸುಮ ಬಂಡವಾಳ ಹೂಡಿದ್ದಾರೆ. ಕಬ್ಬಡಿ ನರೇಂದ್ರ ಬಾಬು ಚಿತ್ರಕಥೆ, ಸಂಭಾಷಣೆ, ಸಾಹಿತ್ಯವಿದೆ.

‘ಚಿತ್ರವು 1980 ಹಾಗೂ 2000ನೇ ಇಸವಿಯಲ್ಲಿ ನಡೆಯುವ ಎರಡು ಕಥೆಗಳನ್ನು ಹೊಂದಿದೆ. ಮೊದಲನೇ ಜೋಡಿಯ ಪ್ರೇಮ ವಿಫಲವಾಗುತ್ತದೆ. ಎರಡನೇ ಜೋಡಿಯ ಪ್ರೀತಿ ಯಶಸ್ಸು ಕಾಣುತ್ತದೆ. ಇವೆರೆಡರ ನಡುವೆ ಸನ್ನಿವೇಶಗಳು ಮನಸ್ಸನ್ನು ಕದಡುತ್ತವೆ. ಸಿನಿಮಾದಲ್ಲಿ ಮಳೆಯು ಮಹತ್ವದ ಪಾತ್ರವನ್ನು ವಹಿಸಿದೆ. ಜತೆಗೆ ಅರ್ಥಪೂರ್ಣ ಸಂದೇಶಗಳು ಅಲ್ಲಲ್ಲಿ ಬರುತ್ತವೆ. ಶೃಂಗೇರಿ, ಹೊರನಾಡು, ಕೊಪ್ಪ, ಹರಿಹರಪುರ, ಆಗುಂಬೆ ಮುಂತಾದೆಡೆ ಚಿತ್ರೀಕರಣ ನಡೆಸಲಾಗಿದೆ. ಶೀಘ್ರದಲ್ಲಿಯೇ ಚಿತ್ರ ತೆರೆಗೆ ಬರಲಿದೆ’ ಎಂದರು ನಿರ್ದೇಶಕ.

ಜಿ.ಲಿಖಿತ್, ಜಯವರ್ಧನ್ಗೆ ಸುಲಕ್ಷ ಖೈರ, ಭೂಮಿಕ ಗೌಡ ಜೋಡಿಯಾಗಿದ್ದಾರೆ. ಚಂದ್ರಶೇಖರ ರೆಡ್ಡಿ ಎ.ಎಂ, ಪ್ರಕಾಶ್ಮೂರ್ತಿ, ಕುಮಾರಿ ಸ್ವರ್ಣ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಅತಿಶಯ ಜೈನ್ ಸಂಗೀತ, ಶಾಂತಾರಾವ್ ಇಪಿಲಿ ಛಾಯಾಚಿತ್ರಗ್ರಹಣ, ಧನುಷ್ ವೀರ್ ಸಂಕಲನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.