ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರೇಮಂ ಪೂಜ್ಯಂ’ ಟೀಸರ್‌ ವೀಕ್ಷಕರ ಅಭಿಮತ ಇಂದು ಪ್ರಸಾರ

Last Updated 15 ಮಾರ್ಚ್ 2021, 6:55 IST
ಅಕ್ಷರ ಗಾತ್ರ

ನಟ ‘ನೆನಪಿರಲಿ’ ಪ್ರೇಂ ಅಭಿನಯದ ‘ಪ್ರೇಮಂ ಪೂಜ್ಯಂ’ ಚಿತ್ರದ ಟೀಸರ್‌ ಬಗೆಗೆ ಜನರ ಅಭಿಪ್ರಾಯದ 4ನೇ ಕಂತು ಮಾರ್ಚ್‌ 15ರಂದು ಸಂಜೆ 6.30ಕ್ಕೆ ಬಿಡುಗಡೆ ಆಗಲಿದೆ.ಕೆದಂಬಾಡಿ ಕ್ರಿಯೇಷನ್ಸ್‌ನ ಯೂಟ್ಯೂಬ್‌ಚಾನೆಲ್‌ನಲ್ಲಿ ಪ್ರಸಾರ ಆಗಲಿದೆ.

ಫೆಬ್ರುವರಿಯಲ್ಲಿ 1.05 ನಿಮಿಷದ ಟೀಸರ್‌ನ್ನು 2,069,758 ಮಂದಿ ವೀಕ್ಷಿಸಿದ್ದಾರೆ. ಅವುಗಳ ಪೈಕಿ ಆಯ್ದ ಕೆಲವನ್ನು ಮೂರು ಕಂತುಗಳಲ್ಲಿ ಪ್ರಸಾರ ಮಾಡಲಾಗಿದೆ.

ಟ್ವಿಟರ್‌ನಲ್ಲಿ ಪ್ರೇಮ್‌ ಅವರು ಈ ವಿಷಯ ಹಂಚಿಕೊಂಡಿದ್ದು, ವೀಕ್ಷಕರ ಅಭಿಪ್ರಾಯ ಕೇಳಿದ್ದಾರೆ.

ಟ್ವಿಟರ್‌ನಲ್ಲಿ ನಮ್ಮ #PREMAMPOOJYAM, #STAYLOVELY ಎಂಬ ಹ್ಯಾಷ್‌ ಟ್ಯಾಗ್‌ನಲ್ಲಿ ಈ ಮಾಹಿತಿ ಟ್ರೆಂಡಿ ಆಗಿದೆ. ಚಿತ್ರ ಯಾವಾಗ ಬಿಡುಗಡೆ ಎಂದು ಹಲವು ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಕೆದಂಬಾಡಿ ಕ್ರಿಯೇಷನ್ಸ್‌ ಲಾಂಛನದ ಅಡಿ ಎ. ರಾಘವೇಂದ್ರ ಅವರು ಈ ಚಿತ್ರ ನಿರ್ಮಿಸಿದ್ದಾರೆ. ಇದು ಪ್ರೇಂ ಅವರ 25ನೇ ಚಿತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT