ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಕಳದ ಕಥೆ ‘ಕಣಂಜಾರು’

Published 5 ಜುಲೈ 2024, 0:34 IST
Last Updated 5 ಜುಲೈ 2024, 0:34 IST
ಅಕ್ಷರ ಗಾತ್ರ

ಈ ಹಿಂದೆ ‘ಮಹಾನುಭಾವರು’ ಚಿತ್ರದಲ್ಲಿ ನಟಿಸಿದ್ದ ಆರ್.ಬಾಲಚಂದ್ರ ನಟಿಸಿ, ನಿರ್ದೇಶಿಸಿರುವ ‘ಕಣಂಜಾರು’ ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.

‘ಕಣಂಜಾರು’ ಕಾರ್ಕಳ ಬಳಿಯ ಊರಿನ ಹೆಸರು. ಕಥೆ ಅಲ್ಲಿಯೇ ನಡೆಯುವುದರಿಂದ ಚಿತ್ರಕ್ಕೆ ಅದೇ ಶೀರ್ಷಿಕೆ ಇಡಲಾಗಿದೆ. ಕಾರ್ಕಳ, ಉಡುಪಿ, ಹೊನ್ನಾವರದಲ್ಲಿ 60 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಚಿತ್ರ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ತೆರೆಗೆ ತರಲು ಯೋಜಿಸಿದ್ದೇವೆ’ ಎಂದರು ಆರ್.ಬಾಲಚಂದ್ರ.

ಅಪೂರ್ವ, ಶರ್ಮಿತಾ ಗೌಡ,ಹಿರಿಯ ನಟ ರಾಮಕೃಷ್ಣ ಮೊದಲಾದವರು ಚಿತ್ರದಲ್ಲಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ, ಶಶಾಂಕ್ ಶೇಷಗಿರಿ ಹಿನ್ನೆಲೆ ಸಂಗೀತ, ಮಂಜುನಾಥ್ ಹೆಗ್ಡೆ ಛಾಯಾಗ್ರಹಣ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT