ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಓಲ್ಡ್‌ ಮಾಂಕ್’ ಸಿನಿಮಾ; ಫೆ. 25ರಂದು ರಾಜ್ಯದಾದ್ಯಂತ ಬಿಡುಗಡೆ

ಹುಬ್ಬಳ್ಳಿ ಸೇರಿದಂತೆ ರಾಜ್ಯದ ನಾಲ್ಕು ಕಡೆ ಫೆ. 24ಕ್ಕೆ ಪ್ರೀಮಿಯರ್ ಷೋ
Last Updated 18 ಫೆಬ್ರುವರಿ 2022, 12:21 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಶ್ರೀನಿ ನಟನೆ ಹಾಗೂ ನಿರ್ದೇಶನದ ‘ಓಲ್ಡ್ ಮಾಂಕ್’ ಚಲನಚಿತ್ರವು ಫೆ. 25ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಹುಬ್ಬಳ್ಳಿ, ಬೆಂಗಳೂರು, ದಾವಣಗೇರಿ ಹಾಗೂ ಮೈಸೂರು ಸೇರಿದಂತೆ ರಾಜ್ಯದ ನಾಲ್ಕು ಕಡೆ ಫೆ. 24ರಂದು ಪ್ರೀಮಿಯರ್ ಷೋ ನಡೆಯಲಿದೆ.

ಸಿನಿಮಾ ಪ್ರಚಾರ ನಿಮಿತ್ತ ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿಗೆ ಬಂದಿದ್ದ ಶ್ರೀನಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಬಳಿಕ ಮಾಧ್ಯಮದವರೊಂದಿಗೆ ಮಾತಿಗೆ ಕುಳಿತರು.

‘ರಾಜ್ಯದಾದ್ಯಂತ 100 ಥಿಯೇಟರ್‌ಗಳಲ್ಲಿ ನಮ್ಮ ಸಿನಿಮಾ ತೆರೆ ಕಾಣಲಿದೆ. ಚಿತ್ರದ ಟ್ರೇಲರ್‌ ಹಾಗೂ ಹಾಡುಗಳಿಗೆ ಜನರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿರುವುದು ನಮ್ಮ ಹುಮ್ಮಸ್ಸನ್ನು ಹೆಚ್ಚಿಸಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಬಿಡುಗಡೆಗೆ ಮುನ್ನವೇ ಚಿತ್ರದ ರಿಮೇಕ್ ಹಕ್ಕು ತೆಲುಗಿಗೆ ಮಾರಾಟವಾಗಿದೆ. ನಾಲ್ಕು ಹಾಡುಗಳಿದ್ದು, ಸೌರಭ್ ವೈಭವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಗಿಚ್ಚ ಗಿಲಿಗಿಲಿ’ ಎಂಬ ಹಾಡನ್ನು ಹುಬ್ಬಳ್ಳಿಯ ಬಸವರಾಜ ಮೊರಬ ಎಂಬುವವರು ಹಾಡಿದ್ದಾರೆ’ ಎಂದರು.

‘ಭರತ್ ಪರಶುರಾಮ್ ಅವರ ಸಿನಿಮಾಟೊಗ್ರಫಿ, ದೀಪು ಎಸ್. ಕುಮಾರ್ ಸಂಕಲನವಿರುವ ಚಿತ್ರಕ್ಕೆ ನಾನೂ ಸೇರಿದಂತೆ ನಾಲ್ವರು
ಬಂಡವಾಳ ಹಾಕಿದ್ದೇವೆ. ಅದಿತಿ ಪ್ರಭುದೇವ ಅವರು ನಾಯಕಿಯಾಗಿ ನಟಿಸಿದ್ದಾರೆ. ಸುಜಯ್ ಶಾಸ್ತ್ರಿ ಸೇರಿದಂತೆ ಇತರರು ತಾರಾಗಣದಲ್ಲಿದ್ದಾರೆ’ ಎಂದು ಹೇಳಿದರು.

‘ಕನ್ನಡ ಸಿನಿಮಾಗಳಿಗೆ ಉತ್ತರ ಕರ್ನಾಟಕವು ಮುಖ್ಯ ಮಾರುಕಟ್ಟೆ. ಇಲ್ಲಿನ ಜನ ದುಡ್ಡು ಕೊಟ್ಟು ಸಿನಿಮಾ ನೋಡುವುದಷ್ಟೇ ಅಲ್ಲದೆ, ಕಲಾವಿದರನ್ನು ಪ್ರೀತಿಸಿ ಪ್ರೋತ್ಸಾಹಿಸುತ್ತಾರೆ. ಇಲ್ಲಿನ ಜನ ಮೆಚ್ಚಿಕೊಳ್ಳುವ ಸಿನಿಮಾ ಎಲ್ಲಾ ಕಡೆ ಗೆಲ್ಲುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಓಲ್ಡ್ ಮಾಂಕ್ ಸಿನಿಮಾ ಬಳಿಕ, ‘ಆಂಡಾಳಮ್ಮ’, ‘ಬೀರಬಲ್‌–2’ ಹಾಗೂ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ಚಿತ್ರದಲ್ಲಿ ನಟಿಸುತ್ತಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT