ಎಸ್.ಭಗತ್ ರಾಜ್ ನಿರ್ದೇಶನದ ‘ಠಾಣೆ’ ಚಿತ್ರದ ಹಾಡುಗಳು ಬಿಡುಗಡೆಗೊಂಡಿವೆ. ಕ್ರೈಂ, ಥ್ರಿಲ್ಲರ್ ಕಥೆಯನ್ನು ಹೊಂದಿರುವ ಚಿತ್ರ ಶೀಘ್ರದಲ್ಲಿ ತೆರೆಗೆ ಬರಲಿದೆ.

‘20 ವರ್ಷಗಳ ಹಿಂದೆ ಮಾಧ್ಯಮ ಮತ್ತು ಪೊಲೀಸ್ ಠಾಣೆಗಳ ಪ್ರಮಾಣ ಕಡಿಮೆ ಇದ್ದ ಕಾರಣ ಜನರೇ ನ್ಯಾಯಕ್ಕಾಗಿ ಹೋರಾಡಿ ಗಮನ ಸೆಳೆಯುತ್ತಿದ್ದರು. ಆ ಕಾಲದಲ್ಲಿ ಚಿತ್ರದ ನಾಯಕ ಕಾಳಿ ನ್ಯಾಯಕ್ಕಾಗಿ ಯಾವ ರೀತಿಯ ಹೋರಾಟ ಮಾಡಿದ ಎನ್ನುವುದೇ ಚಿತ್ರದ ಕಥೆ. ಹಳೆಯ ಕಟ್ಟಡಗಳು, ಸ್ಥಳಗಳನ್ನು ಹುಡುಕಿ ಚಿತ್ರೀಕರಣ ಮಾಡಲಾಗಿದೆ’ ಎಂದರು ನಿರ್ದೇಶಕರು.

ಹಾಡುಗಳಿಗೆ ಮಾನಸ ಹೊಳ್ಳ ಸಂಗೀತ ಸಂಯೋಜಿಸಿದ್ದಾರೆ. ‘ಒಗಟುಗಳನ್ನು ಬಳಸಿಕೊಂಡು ಒಂದು ಹಾಡು ಸಿದ್ಧಪಡಿಸಿದ್ದೇವೆ. ‘ಮಜಾ ಟಾಕೀಸ್’ ಖ್ಯಾತಿಯ ರೇಮೊ ಇದಕ್ಕೆ ಸಾಹಿತ್ಯ ಬರೆದಿದ್ದಾರೆ. ರಾಜೇಶ್ ಕೃಷ್ಣ, ರೇಮೊ ಮತ್ತು ರಿಯಾಲಿಟಿ ಶೋಗಳಲ್ಲಿ ಹಾಡಿರುವ ಕೆಲ ಮಕ್ಕಳು ಹಾಡುಗಳಿಗೆ ಧ್ವನಿಯಾಗಿದ್ದಾರೆ’ ಎಂದರು ಮಾನಸ ಹೊಳ್ಳ.

ರಂಗಭೂಮಿ ಕಲಾವಿದ ಪ್ರವೀಣ್ಗೆ ವಿದುಷಿ ಹರಿಣಾಕ್ಷಿ ಜೋಡಿಯಾಗಿದ್ದಾರೆ. ಗಾಯತ್ರಿ ಎಂ ಬಂಡವಾಳ ಹೂಡಿದ್ದು, ಬಿ.ವಿ.ರಾಜಾರಾಂ, ಬಲ ರಾಜವಾಡಿ, ಪಿ.ಡಿ.ಸತೀಶ್ ಚಂದ್ರ ಮುಂತಾದವರು ಚಿತ್ರದಲ್ಲಿದ್ದಾರೆ. ಪ್ರಶಾಂತ್ ಸಾಗರ್ ಛಾಯಾಚಿತ್ರಗ್ರಹಣ, ಸುರೇಶ್ ಅರಸ್ ಸಂಕಲನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.