ಬುಧವಾರ, ಮಾರ್ಚ್ 29, 2023
23 °C

ಹೊಸ ವರ್ಷಕ್ಕೆ ಸಂಜನಾ ‘ಡ್ಯಾಶ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರ್‍ಯಾಪರ್‌, ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿ ನಟನೆಯ ಚೊಚ್ಚಲ ಚಿತ್ರ ‘ಸೂತ್ರಧಾರಿ’ಯ ಹಾಡೊಂದು ಹೊಸ ವರ್ಷದ ಹೊಸ್ತಿಲಲ್ಲಿ ಬಿಡುಗಡೆಯಾಗಿದ್ದು, ಚಂದನ್‌ ಜೊತೆಗೆ ‘ಸಲಗ’ ಖ್ಯಾತಿಯ ಸಂಜನಾ ಆನಂದ್‌ ಹೆಜ್ಜೆ ಹಾಕಿದ್ದಾರೆ.

‘ಈ ಹಾಡು ಹೊಸ ವರ್ಷಕ್ಕೆ ನಮ್ಮ ಚಿತ್ರತಂಡದಿಂದ ಉಡುಗೊರೆ. ಈ ಹಾಡಿಗೆ ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ನಾನು ಹಾಗೂ ಚೇತನ್ ಕುಮಾರ್ ಈ ಹಾಡನ್ನು ಬರೆದಿದ್ದೇವೆ. ಸದ್ಯ ಈ ಹಾಡು ಎಲ್ಲೆಡೆ ವೈರಲ್‌ ಆಗುತ್ತಿದೆ’ ಎನ್ನುತ್ತಾರೆ ಚಂದನ್ ಶೆಟ್ಟಿ.

ಇದೊಂದು ವಿಶೇಷ ಹಾಡಾಗಿದ್ದು, ಸಂಜನಾ ಈ ಹಾಡಿನಲ್ಲಷ್ಟೇ ಇರಲಿದ್ದಾರೆ. ಅಪೂರ್ವ ‘ಸೂತ್ರಧಾರಿ’ ಚಿತ್ರದ ನಾಯಕಿ. ಕಿರಣ್‌ ಕುಮಾರ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು, ಮೈ ಮೂವಿ ಬಜಾರ್ ಖ್ಯಾತಿಯ ನವರಸನ್ ಅವರ ನಿರ್ಮಾಣದ ಚಿತ್ರ ಇದಾಗಿದೆ. ಚಿತ್ರದ ಶೇ 90ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ ಎಂದಿದೆ ಚಿತ್ರತಂಡ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು