ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಪ್ತ ಸಾಗರದಾಚೆ ಎಲ್ಲೋ‘ ಟೀಸರ್‌: ಅಭಿಮಾನಿಗಳಿಗೆ ಇಷ್ಟವಾದ ಮನು–ಪ್ರಿಯಾ ಜೋಡಿ

Last Updated 7 ಜೂನ್ 2022, 6:42 IST
ಅಕ್ಷರ ಗಾತ್ರ

ಹೇಮಂತ್‌ ಎಂ. ರಾವ್‌ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಪ್ತ ಸಾಗರದಾಚೆ ಎಲ್ಲೋ ಟೀಸರ್‌ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಕಂಡಿದೆ. ಟೀಸರ್‌ ನೋಡಿರುವ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಮುದ್ರ ತೀರ, ಅಲೆಗಳು, ಹಳೆಯ ಟೇಪ್‌ರಿಕಾರ್ಡರ್‌, ಪ್ರೀತಿಯ ಮಾತುಗಳು ರಕ್ಷಿತ್‌ ಅಭಿಮಾನಿಗಳಿಗೆ ಇಷ್ಟವಾಗಿದೆ.

ಈ ಚಿತ್ರದಲ್ಲಿ ನಟ ರಕ್ಷಿತ್‌ ಶೆಟ್ಟಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ದ್ವಿತೀಯಾರ್ಧದ ಭಾಗಕ್ಕಾಗಿ ರಕ್ಷಿತ್‌ ತೂಕ ಹೆಚ್ಚಿಸಿಕೊಳ್ಳಲಿದ್ದಾರೆ ಎನ್ನುವುದು ಹಳೆಯ ಸುದ್ದಿ. ಆದರೆ ತೂಕ ಹೆಚ್ಚಿಸಿಕೊಂಡ ರಕ್ಷಿತ್‌ ಹೇಗೆ ಕಾಣಿಸಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳದ್ದು.

ರಕ್ಷಿತ್‌ಗೆ ಜೋಡಿಯಾಗಿ ನಟಿ ರುಕ್ಮಿಣಿ ವಸಂತ್‌ ಬಣ್ಣಹಚ್ಚಿದ್ದಾರೆ. ಚಿತ್ರದಲ್ಲಿ ರಕ್ಷಿತ್‌ ಹೆಸರು ಮನು, ರುಕ್ಮಿಣಿ ಹೆಸರು ಪ್ರಿಯಾ ಎಂದು ಇಡಲಾಗಿದೆ. ಮನು–ಪ್ರಿಯಾ ಜೋಡಿಯಾ ಪೋಟೊಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಕಳೆದ ಆರು ವರ್ಷದಲ್ಲಿ ಎರಡೇ ಸಿನಿಮಾಗಳಲ್ಲಿ ನಟಿಸಿರುವ ರಕ್ಷಿತ್‌ ಅವರ ಎರಡು ಸಿನಿಮಾಗಳುರಿಲೀಸ್‌ಗೆಸಜ್ಜಾಗಿವೆ. ಜೂನ್‌ 10ಕ್ಕೆ ‘777 ಚಾರ್ಲಿ’ ಸಿನಿಮಾ ತೆರೆಕಾಣಲಿದ್ದು, ಈಗಾಗಲೇ ದೇಶದ ಹಲವು ನಗರಗಳಲ್ಲಿ ಈ ಚಿತ್ರದ ಪ್ರೀಮಿಯರ್‌ ಶೋ ನಡೆಯುತ್ತಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರೀಕರಣವೂ ಪೂರ್ಣಗೊಂಡಿದೆ. ವರ್ಷಾಂತ್ಯಕ್ಕೆ ಈ ಸಿನಿಮಾ ತೆರೆ ಕಾಣುವ ಸಾಧ್ಯತೆ ಇದೆ.

ಇದಾದ ಬಳಿಕ ಕ್ರಮವಾಗಿ, ‘ರಿಚರ್ಡ್‌ ಆ್ಯಂಟನಿ’, ‘ಕಿರಿಕ್‌ ಪಾರ್ಟಿ–2’, ‘ಮಿಡ್‌ ವೇ ಟು ಮೋಕ್ಷ’ ಹಾಗೂ ‘ಪುಣ್ಯಕೋಟಿ’ ಸಿನಿಮಾಗಳನ್ನು ಕೈಗೆತ್ತಿಕೊಳ್ಳಲು ರಕ್ಷಿತ್‌ ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT