ಬಾಲಿವುಡ್ ಸ್ಟಾರ್ ನಿರ್ದೇಶಕಕರಣ್ ಜೋಹರ್ ಇತ್ತೀಚೆಗೆ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.ಜನ್ಮದಿನದ ಪಾರ್ಟಿಗೆ ಬಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್ ಹಾಗೂ ಕಾಲಿವುಡ್ ತಾರೆಗಳ ದಂಡೇ ನೆರದಿತ್ತು.
ಸಿನಿಮಾರಂಗದಬಹುತೇಕ ಸ್ಟಾರ್ ನಟ ನಟಿಯರು, ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಒಟ್ಟಾಗಿ ಒಂದೇ ಸೂರಿನಡಿ ಮಿಂಚಿದ್ದರು. ಇದೇ ವೇಳೆಹಲವರಿಗೆ ಕೋವಿಡ್ ಹರಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕರಣ್ ಜೋಹರ್ ಅವರು 50ನೇ ವರ್ಷದ ಜನ್ಮದಿನದ ಪಾರ್ಟಿಯಲ್ಲಿ ನೂರಾರು ಜನರು ಭಾಗವಹಿಸಿದ್ದರು. ಇದರಲ್ಲಿ ಪಾಲ್ಗೊಂಡಿದ್ದವರ ಪೈಕಿ 55 ಜನರಿಗೆ ಕೋವಿಡ್ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲೂ ಪೋಸ್ಟ್‌ಗಳು ಹರಿದಾಡುತ್ತಿವೆ.
ಕರೀನಾ ಕಪೂರ್, ಸೈಫ್ ಅಲಿ ಖಾನ್, ಶಾರುಖ್ ಖಾನ್ ದಂಪತಿ, ಹೃತಿಕ್ ರೋಷನ್, ರವೀನಾ ಟಂಡನ್, ಮಲೈಕಾ ಅರೋರಾ, ಜಾಹ್ನವಿ ಕಪೂರ್, ಅನನ್ಯ ಪಾಂಡೆ, ಕಾಜೊಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.