ಭಾನುವಾರ, ಸೆಪ್ಟೆಂಬರ್ 26, 2021
28 °C

ಪ್ರವಾಸಿ ಮಾರ್ಗದರ್ಶಕರಾಗಿದ್ದಾರೆ ನಟಿ ಸಾರಾ ಆಲಿ ಖಾನ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Sara Ali Khan Instagram

ಬೆಂಗಳೂರು: ನಟ ಸೈಫ್ ಆಲಿ ಖಾನ್ ಪುತ್ರಿ ಸಾರಾ ಆಲಿ ಖಾನ್ ಈಗ ಪ್ರವಾಸಿ ಮಾರ್ಗದರ್ಶಕರಾಗಿದ್ದಾರೆ. 

'ನಮಸ್ತೇ ದರ್ಶಕೋ' ಎಂಬ ಸರಣಿಯಲ್ಲಿ ಅವರು ಮತ್ತೆ ಕಾಣಿಸಿಕೊಂಡಿದ್ದು, ತಮ್ಮ ಇನ್‌ಸ್ಟಾಗ್ರಾಂನಲ್ಲಿ ಕಿರು ವಿಡಿಯೊ ಒಂದನ್ನು ಪೋಸ್ಟ್ ಮಾಡಿದ್ದಾರೆ.

ಸಾರಾ ಆಲಿ ಖಾನ್ ಇತ್ತೀಚೆಗೆ ವೈಷ್ಣೋ ದೇವಿ, ರಿಷಿಕೇಶ, ಇಂಡಿಯಾ ಗೇಟ್, ಬಿಹಾರದ ಒಂದು ಹಳ್ಳಿ ಮತ್ತು ಜೈಪುರ ಹಾಗೂ ಗೋವಾಗೆ ಭೇಟಿ ನೀಡಿದ್ದರು.

ಈ ಬಾರಿ ಸಾರಾ ಆಲಿ ಖಾನ್ ಜಮ್ಮು ಮತ್ತು ಕಾಶ್ಮೀರದಿಂದ ದೆಹಲಿ, ಮತ್ತು ಅಲ್ಲಿಂದ ಬಿಹಾರವಾಗಿ ಗೋವಾಗೆ ತೆರಳಿದ್ದ ಪ್ರವಾಸದ ವಿವಿಧ ಸಂದರ್ಭಗಳ ಕಿರು ಅವಧಿಯ ವಿಡಿಯೊಗಳನ್ನು ಜೋಡಿಸಿ ನಮಸ್ತೇ ದರ್ಶಕ್ ಸರಣಿಯಲ್ಲಿ 2:30 ನಿಮಿಷದ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಲ್ಲದೆ, ಹಿಂದು ಧಾರ್ಮಿಕ ತಾಣಗಳಿಗೂ ಭೇಟಿ ನೀಡಿ ಸಾರಾ ಆಲಿ ಖಾನ್ ಸುದ್ದಿಯಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು