ಜೆಪಿ ಎಂಟರ್‌ಟೈನ್‌ಮೆಂಟ್ ವರ್ಲ್ಡ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಸ್ಕೇರಿ ಫಾರೆಸ್ಟ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರವು ಫೆಬ್ರುವರಿ 26ಕ್ಕೆ ಬಿಡುಗಡೆಯಾಗಲಿದೆ. ಸಿನಿಮಾದ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಮಾಧ್ಯಮದ ಮುಂದೆ ಬಂದಿದ್ದ ತಂಡ ಒಂದಿಷ್ಟು ಮಾಹಿತಿ ಹಂಚಿಕೊಂಡಿತ್ತು.

ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ಜಯಪ್ರಭು ಆರ್. ಲಿಂಗಾಯತ್ ‘ನಾನು ಕಳೆದ ಹಲವು ವರ್ಷಗಳಿಂದ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದೇನೆ. ಇದೀಗ ಸಿನಿಮಾ ಕ್ಷೇತ್ರದಲ್ಲಿ ಏನಾದರೂ ಮಾಡಬೇಕು ಎಂಬ ಕಾರಣಕ್ಕೆ ಬಂದಿದ್ದೇನೆ. ಬಾಲಿವುಡ್‌ನಲ್ಲಿ ಒಂದಷ್ಟು ಮಂದಿ ಪರಿಚಯ ಇದಿದ್ದರಿಂದ ಅವರನ್ನೂ ಈ ಪ್ರಾಜೆಕ್ಟ್‌ನಲ್ಲಿ ಸೇರಿಸಿಕೊಂಡಿದ್ದೇನೆ. ಸಿನಿಮಾ ಬಗ್ಗೆ ಹೇಳುವುದಾದರೆ, ಇಲ್ಲಿ ನಾನು ಜೈ ಎಂಬ ಕಾಲೇಜು ವಿದ್ಯಾರ್ಥಿಯ ಪಾತ್ರ ಮಾಡಿದ್ದೇನೆ. ಸಂಶೋಧನೆ ಮಾಡಲು ಕಾಡಿಗೆ ಹೋಗುವ ಯುವಕರು ಏನೆಲ್ಲ ವಿಚಿತ್ರಗಳನ್ನು ಅನುಭವಿಸುತ್ತಾರೆ ಎಂಬುದನ್ನು ಸಿನಿಮಾದಲ್ಲಿ ತೋರಿಸಿದ್ದೇವೆ, ಹಾರರ್ ಅಂಶದ ಜತೆಗೆ ತ್ರಿಕೋನ ಪ್ರೇಮಕಥೆಯೂ ಸಿನಿಮಾದಲ್ಲಿದೆ’ ಎಂದರು.

ಈ ಚಿತ್ರಕ್ಕೆ ಸಂಜಯ್ ಅಭೀರ್ ನಿರ್ದೇಶನವಿದೆ. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸಂಜಯ್ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ಬಹುಭಾಷಾ ನಟ ಯಶ್‌ಪಾಲ್ ಶರ್ಮ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಕೊಡಗಿನ ಟೀನಾ ಪೊನ್ನಪ್ಪ, ಆಮ್ರಿನ್, ಕಲ್ಪನಾ ಈ ಚಿತ್ರದ ನಾಯಕಿಯರು. ಜೀತ್ ರಾಯ್ದತ್ ಈ ಚಿತ್ರದ ದ್ವಿತೀಯ ನಾಯಕ. ಅಷ್ಟೇ ಅಲ್ಲದೆ ಅನುಭವಿ ಕಲಾವಿದರ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ. ನಿರ್ಮಾಪಕರ ಪುತ್ರಿ ಬೇಬಿ ಪೂಜಾ ಸಹ ಈ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ.

ಕನ್ನಡದ ಯುವಪ್ರತಿಭೆ ಆದಿ ಹಾಗೂ ಎಲ್.ಕೆ. ಲಕ್ಷ್ಮೀಕಾಂತ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಲಕ್ಷ್ಮೀಕಾಂತ್ ಅವರದ್ದು. ಹಾಲಿವುಡ್‌ನ ಜಂಗಲ್ ಬುಕ್ 1994, ಬಾಲಿವುಡ್‌ನ ರಾಗಿಣಿ ಎಂ.ಎಂ.ಎಸ್ 2 ಮುಂತಾದ ಚಿತ್ರಗಳ ಛಾಯಾಗ್ರಾಹಕರಾದ ನರೇನ್ ಗೇಡಿಯಾ ಅವರ ಛಾಯಾಗ್ರಹಣ, ರಾಜೇಶ್ ಶಾ ಸಂಕಲನ ಹಾಗೂ ದೀಪಕ್ ಶರ್ಮ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.