ನಟ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಅವರ ‘ಸೀತಾಯಣ’ ಚಿತ್ರದ ಸಾಹಿತ್ಯ ಸಹಿತ ಹಾಡಿನ ವಿಡಿಯೋವನ್ನು ನಟ ಉಪೇಂದ್ರ ಬಿಡುಗಡೆ ಮಾಡಿದರು.

ಅ. 25ರಂದು ವಿಡಿಯೋ ಬಿಡುಗಡೆ ಮಾಡಿದ ಉಪೇಂದ್ರ ಅವರು ಅಕ್ಷಿತ್ ಬೆನ್ನು ತಟ್ಟಿದರು.

ಸೀತಾಯಣದಲ್ಲಿ ಮದುವೆ ದೃಶ್ಯಕ್ಕೆ ಈ ಹಾಡನ್ನು ಜೋಡಿಸಲಾಗಿದೆ. ಹಾಡಿನ ದೃಶ್ಯ, ಶೂಟಿಂಗ್ ಸನ್ನಿವೇಶಗಳೂ ವಿಡಿಯೋದಲ್ಲಿವೆ.

ಅಂದಹಾಗೆ ಸೀತಾಯಣ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.

’ಶ್ರೀರಾಮ ಪತ್ನಿ, ಜನಕಸ್ಯ ಪುತ್ರಿ, ಸೀತಾಂಗನಾ ಸುಂದರ ಕೋಮಲಾಂಗಿ, ಭೂಗರ್ಭ ಜಾತಾ, ಭುವನೈಕ ಮಾತಾ ವಧೂವರಾಭ್ಯಂ ವರದಾ ಭವಂತು...’ ಸಾಲಿನಿಂದ ಹಾಡು ಆರಂಭವಾಗುತ್ತಿದೆ. ಈ ಸಾಲನ್ನೇ ಚಿತ್ರದ ಪ್ರಾರ್ಥನಾ ಗೀತೆಯಂತೆ ಬಳಸಿದ್ದೇವೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಮಹರ್ಷಿ ವಾಲ್ಮೀಕಿ ರಾಮಾಯಣದಲ್ಲಿ ಸೀತಾರಾಮ ಕಲ್ಯಾಣವನ್ನು ವರ್ಣಿಸಿದ ಪರಿ ಮತ್ತು ಮುದ್ರಿತ ಆಮಂತ್ರಣಗಳು ಇಲ್ಲದ ಕಾಲದಲ್ಲಿ ಶ್ಲೋಕ ರೂಪದಲ್ಲಿ ಮದುವೆಯ ಆಹ್ವಾನ ಹೇಗೆ ಇರುತ್ತಿತ್ತು ಎಂಬುದನ್ನು ಸಂಸ್ಕೃತದ ಈ ಸಾಲುಗಳು ಚಿತ್ರಿಸಿವೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ವಿಡಿಯೋ ನೋಡಲು ಲಿಂಕ್:https://www.youtube.com/watch?v=SEW7MAPH24I

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.