ಭಾನುವಾರ, ಸೆಪ್ಟೆಂಬರ್ 26, 2021
21 °C

ಹಿರಿಯ ನಟ ಉದಯ ಕುಮಾರ್ ಪತ್ನಿ ಸುಶೀಲಾದೇವಿ ಉದಯ ಕುಮಾರ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಿತ್ರನಟ ದಿವಂಗತ ಉದಯಕುಮಾರ್‌ ಅವರ ಪತ್ನಿ ಸುಶೀಲಾ ದೇವಿ (84) ಅವರು ಬುಧವಾರ ಅನಾರೋಗ್ಯದಿಂದ ನಿಧನ ರಾದರು.

ಉದಯಕುಮಾರ್‌ ಅವರು ಸ್ಥಾಪಿಸಿದ್ದ ಉದಯಕಲಾ ನಿಕೇತನ ಸಂಸ್ಥೆಯ ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸಿದ ಅವರು ನಟನೆ, ನೃತ್ಯ, ಸಂಗೀತ ತರಬೇತಿ ನೀಡುತ್ತಿದ್ದರು.

1960–70ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಮೇರುನಟನಾಗಿ ಸಾಧನೆ ಮಾಡಿದ ‘ಕಲಾಕೇಸರಿ’ ಉದಯ ಕುಮಾರ್‌ ನೆನಪಿನಲ್ಲಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದ್ದರು.

ಅವರಿಗೆ ಪುತ್ರಿಯರಾದ ವರ್ಧಿನಿ ಮೂರ್ತಿ, ರೇಣುಕಾಬಾಲಿ ಉದಯ ಕುಮಾರ್ ಇದ್ದಾರೆ.  ಉದಯಕುಮಾರ್‌ ಅವರ ಮೊದಲ ಪತ್ನಿ ಕಮಲಮ್ಮ 2019ರ ಡಿ. 11ರಂದು ನಿಧನರಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು