ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಬಿಗಿಲ್‌' ನಿರ್ದೇಶಕ ಅಟ್ಲಿ ಜೊತೆ ಶಾರುಕ್‌ ಹೊಸ ಸಿನಿಮಾ?

Last Updated 31 ಅಕ್ಟೋಬರ್ 2019, 12:43 IST
ಅಕ್ಷರ ಗಾತ್ರ

ನಟ ಶಾರುಕ್‌ ಖಾನ್‌ ಅವರ ಮುಂದಿನ ಸಿನಿಮಾ ಯಾವುದು? ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿದೆ.

ಶಾರುಕ್‌ ಹೊಸ ಸಿನಿಮಾ ‘ಸಂಕಿ’. ಅವರ ಹುಟ್ಟುಹಬ್ಬದಂದು (ನವೆಂಬರ್‌ 2) ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ ಎಂಬ ಮಾತುಗಳು ಬಿ–ಟೌನ್‌ನಲ್ಲಿ ಹರಿದಾಡುತ್ತಿದೆ.

ತೇರಿ, ಮರ್ಸೆಲ್‌, ಬಿಗಿಲ್‌ ಹೀಗೆ ಸಾಲು ಸಾಲು ಹಿಟ್‌ ಸಿನಿಮಾಗಳನ್ನು ನೀಡಿದ ಅಟ್ಲಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

ಏಪ್ರಿಲ್‌ ಐಪಿಎಲ್‌ ಪಂದ್ಯಗಳು ನಡೆಯುತ್ತಿರುವಾಗ ಚೈನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಪ್ರೋತ್ಸಾಹಿಸಲು ಶಾರುಕ್‌ ಚೆನ್ನೈಗೆ ಬಂದಿದ್ದ ವೇಳೆ ಹೊಸ ಸಿನಿಮಾದ ಮಾತುಕತೆ ಶುರುವಾಗಿದೆ. ಆಗ ಬಿಗಿಲ್‌ ಮುಕ್ತಾಯ ಹಂತದಲ್ಲಿತ್ತು.

ಜಿರೋ ನಂತರ ಯಾವುದೇ ಸಿನಿಮಾವನ್ನು ಶಾರುಕ್‌ ಖಾನ್‌ ಘೋಷಿಸಿರಲಿಲ್ಲ. ಟ್ವಿಟ್ಟರ್‌ನಲ್ಲಿ ಅವರ ಅಭಿಮಾನಿಗಳು ಎಸ್‌ಆರ್‌ಕೆ ಮುಂದಿನ ಸಿನಿಮಾ ಯಾವುದು ಎಂದೇ ಅಭಿಯಾನ ಶುರು ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT