ಶಾರುಕ್ ಖಾನ್ ಜನ್ಮದಿನ: 56ರ ಹರೆಯದಲ್ಲಿ ಕಿಂಗ್ ಖಾನ್

ಬಾಲಿವುಡ್ ನಟ ಶಾರುಕ್ ಖಾನ್ ಇಂದು(ನವೆಂಬರ್ 2) 56ನೇ ವಯಸ್ಸಿಗೆ ಕಾಲಿರಿಸಿದ್ದಾರೆ. ಕಿಂಗ್ ಖಾನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು ಹಾಗೂ ಸಹ ನಟ–ನಟಿಯರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ.
ಶಾರುಕ್ ಖಾನ್ ನಿವಾಸ ಮನ್ನತ್ ಮುಂದೆ ಪ್ರತಿ ವರ್ಷ ಅಭಿಮಾನಿಗಳು ಸೇರುತ್ತಾರೆ. ಈ ವೇಳೆ ಶಾರುಕ್ ಬಾಲ್ಕನಿಗೆ ಬಂದು ಅಭಿಮಾನಿಗಳತ್ತ ಕೈ ಬೀಸುತ್ತಾರೆ. ಆದರೆ ಈ ವರ್ಷ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುವುದರಿಂದ ಶಾರುಕ್ ಬೇಸರದಲ್ಲಿದ್ದಾರೆ. ಈ ಸಲ ಬಾಲ್ಕನಿಗೆ ಬಂದು ಅಭಿಮಾನಿಗಳನ್ನು ನೋಡುವ ಸಾಧ್ಯತೆ ಕಡಿಮೆ ಎಂದು ಅವರು ಆಪ್ತರು ಹೇಳಿಕೊಂಡಿದ್ದಾರೆ.
ಇನ್ನು ಸಾಮಾಜಿಕ ಮಾಧ್ಯಮಗಳಲ್ಲೂ ಶಾರುಕ್ ಯಾವುದೇ ಪೋಸ್ಟ್ ಹಂಚಿಕೊಂಡಿಲ್ಲ, ಅಭಿಮಾನಿಗಳ ಕುರಿತಂತೆ ಯಾವುದೇ ಬರಹವನ್ನು ಬರೆದಿಲ್ಲ. ‘ಪ್ರತಿ ವರ್ಷದಂತೆ ಈ ವರ್ಷ ನನಗಾಗಿ ನನ್ನ ಮನೆಯ ಮುಂದೆ ಬಂದು ನಿಲ್ಲಬೇಡಿ, ಅಲ್ಲದೇ ಈ ವರ್ಷ ಅಂತರವನ್ನು ಕಾಪಾಡಿಕೊಳ್ಳುವುದು ಮುಖ್ಯ’ ಎಂದು ಅಭಿಮಾನಿಗಳಿಗೆ ಕಳೆದ ವರ್ಷ ಹೇಳಿದ್ದರು.
ಬಾಲಿವುಡ್ ಸಿನಿಮಾ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಸೇರಿದಂತೆ ರಾಜಕೀಯ ನಾಯಕರು, ಉದ್ಯಮಿಗಳು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಜನ್ಮದಿನದ ಶುಭಾಶಯಗಳನ್ನು ಕೋರುತ್ತಿದ್ದಾರೆ.
ಬಾಲಿವುಡ್‌ನ ಬಾದ್‌ಶಾ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಶಾರುಕ್ ಕಳೆದ 3 ದಶಕಗಳಿಂದ ಬಾಲಿವುಡ್ ಸಿನಿರಂಗದಲ್ಲಿ ಸ್ಟಾರ್ ನಟರ ಪಟ್ಟಿಯಲ್ಲಿದ್ದಾರೆ. ಅನೇಕ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿರುವ ಕಿಂಗ್ ಖಾನ್ ರೊಮ್ಯಾಂಟಿಕ್ ಚಿತ್ರಗಳಿಂದಲೂ ಹೆಸರು ಗಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.