ಬುಧವಾರ, ಜೂನ್ 29, 2022
26 °C

ಶಾಹಿದ್‌ಗೆ ಪೆಟ್ಟು, ಹೃತಿಕ್‌ಗೆ ಸರ್ಜರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಜೆಸ್ಸಿ’ ಸಿನಿಮಾ ಚಿತ್ರೀಕರಣದ ವೇಳೆ ಶಾಹಿದ್‌ ಕಪೂರ್ ಮುಖಕ್ಕೆ ಪೆಟ್ಟು ಮಾಡಿಕೊಂಡಿದ್ದಾರೆ. ತೆಲುಗು ರಿಮೇಕ್‌ ‘ಜೆಸ್ಸಿ’ ಸಿನಿಮಾ ಕ್ರಿಕೆಟ್‌ ಆಟಗಾರನ ಕುರಿತ ಚಿತ್ರ. ಸಿನಿಮಾ ತಯಾರಿಗಾಗಿ ಕ್ರಿಕೆಟ್‌ ಆಡುತ್ತಿದ್ದಾಗ ಶಾಹಿದ್ ಮುಖಕ್ಕೆ ಪೆಟ್ಟಾಗಿದೆ.

ಶಾಹಿದ್‌ ಕಪೂರ್ ಕೆಳ ತುಟಿಗೆ ಪೆಟ್ಟು ಬಿದ್ದು ಕಾರಣ ಮುಖ ಊದಿಕೊಂಡಿದೆ. ಹಾಗಾಗಿ ತಲೆಬುರುಡೆ ಚಿತ್ರವಿರುವ ಮಾಸ್ಕ್‌ ಧರಿಸಿಕೊಂಡು ಶಾಹಿದ್‌ ಕಪೂರ್‌ ಓಡಾಡುತ್ತಿದ್ದಾರೆ.

ಒಂದೆರಡು ಹೊಲಿಗೆ ಹಾಕಿದ್ದಾರೆ. ಸ್ವಲ್ಪ ರಕ್ತ ಹೋಗಿದೆಯಷ್ಟೆ. ಯಾವುದೇ ಸಮಸ್ಯೆ ಇಲ್ಲ ಎಂದು ಶಾಹಿದ್ ಟ್ವೀಟ್‌ ಮಾಡಿದ್ದಾರೆ. ತೆಲುಗು ಸಿನಿಮಾ ನಿರ್ದೇಶಿಸಿದ ಗೌತಮ್ ತಿನ್ನಾನೂರಿ ಹಿಂದಿ ಸಿನಿಮಾವನ್ನೂ ನಿರ್ದೇಶಿಸುತ್ತಿದ್ದಾರೆ.

ನಟ ಹೃತಿಕ್ ರೋಷನ್ ಈಚೆಗೆ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಎರಡು ತಿಂಗಳಿನಿಂದ ಮೆದುಳಿನ ರಕ್ತನಾಳದಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯುವಲ್ಲಿ ಮುಂಬೈ ವೈದ್ಯ ಸಫಲರಾಗಿದ್ದಾರೆ.

‘ಬ್ಯಾಂಗ್‌ ಬ್ಯಾಂಗ್’ ಸಿನಿಮಾ ಚಿತ್ರೀಕರಣದ ವೇಳೆ ಸ್ಟಂಟ್‌ ಮಾಡುವಾಗ ಹೃತಿಕ್ ತಲೆಗೆ ಪೆಟ್ಟು ಮಾಡಿಕೊಂಡಿದ್ದರು. ಹೃತಿಕ್‌ ಚೇತರಿಸಿಕೊಳ್ಳುತ್ತಿರುವ ಚಿತ್ರಗಳನ್ನು ಆತನ ತಾಯಿ ಪಿಂಕಿ ರೋಷನ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು