ಗುರುವಾರ , ನವೆಂಬರ್ 14, 2019
19 °C

50 ವಸಂತ ದಾಟಿದ ಶಾರೂಕ್‌ ಸಂಭಾವನೆ ₹30 ಕೋಟಿ

Published:
Updated:

2018ರಲ್ಲಿ ತೆರೆಕಂಡ ಜಿರೊ ಸಿನಿಮಾದ ನಂತರ ತೆರೆಮೇಲೆ ಕಾಣಿಸಿಕೊಳ್ಳದ ಶಾರೂಕ್‌ ಖಾನ್‌ ಈಗ ತಮ್ಮ ಮುಂದಿನ ಸಿನಿಮಾದ ಬಗ್ಗೆ ಘೋಷಣೆ ಮಾಡಿದ್ದಾರೆ. ‘ಶಾರೂಕ್‌ ನಿಮ್ಮ ಮುಂದಿನ ಸಿನಿಮಾ ಯಾವುದು?’ ಎಂದು ಅವರ ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ ಅಭಿಯಾನವನ್ನೇ ಮಾಡಿದ್ದರು.

ತಮಿಳಿನಲ್ಲಿ ‘ಮರ್ಸೆಲ್‌', ಹಾಗೂ ‘ಥೇರಿ’ ಸಿನಿಮಾಗಳನ್ನು ನಿರ್ದೇಶಿಸಿದ್ದ ಅಟ್ಲೀ ಅವರ ಮುಂದಿನ ಚಿತ್ರದಲ್ಲಿ ನಟ ಶಾರೂಕ್‌ ಖಾನ್‌ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

ಈ ಚಿತ್ರಕ್ಕೆ ಶಾರೂಕ್‌ ಖಾನ್‌ ಪಡೆಯುತ್ತಿರುವ ಸಂಭಾವನೆ ₹30 ಕೋಟಿ ಎಂಬ ಸುದ್ದಿ ಕೇಳಿಬರುತ್ತಿದೆ. ದಕ್ಷಿಣ ಭಾರತದ ನಿರ್ದೇಶಕರಿಗೆ ಇದು ದೊಡ್ಡ ಮೊತ್ತ. ಸಾಮಾನ್ಯವಾಗಿ ದಕ್ಷಿಣ ಭಾರತದ ಸ್ಟಾರ್‌ ನಟರು ಒಂದು ಸಿನಿಮಾಕ್ಕೆ ₹10 ಕೋಟಿ ತನಕ ಸಂಭಾವನೆ ಪಡೆಯುತ್ತಾರೆ.

ಈ ಚಿತ್ರವು ಒರಿಜಿನಲ್‌ ಸಿನಿಮಾ. ಇದು ಸಂಪೂರ್ಣ ಮಾಸ್‌ ಚಿತ್ರ ಎಂದು ಚಿತ್ರತಂಡ ಹೇಳಿಕೊಂಡಿದೆ.ಈ ಚಿತ್ರದ ಸ್ಕ್ರಿಫ್ಟ್‌ ಅನ್ನು ಕೆಲ ಸಮಯಗಳ ಹಿಂದೆ ಅಟ್ಲೀ ಸಿದ್ಧಪಡಿಸಿದ್ದರು. ‘ಅಟ್ಲೀ ಅವರ ಸಿನಿಮಾ ಪ್ರೀತಿ ಹಾಗೂ ಕತೆ ಶಾರೂಕ್‌ ಅವರಿಗೆ ಇಷ್ಟವಾಗಿದೆ. ಅವರು ಸದ್ಯದಲ್ಲೇ ಸಿನಿಮಾಕ್ಕೆ ಸಹಿ ಮಾಡಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)