ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವಸಂತ ದಾಟಿದ ಶಾರೂಕ್‌ ಸಂಭಾವನೆ ₹30 ಕೋಟಿ

Last Updated 22 ಅಕ್ಟೋಬರ್ 2019, 6:29 IST
ಅಕ್ಷರ ಗಾತ್ರ

2018ರಲ್ಲಿ ತೆರೆಕಂಡ ಜಿರೊ ಸಿನಿಮಾದ ನಂತರ ತೆರೆಮೇಲೆ ಕಾಣಿಸಿಕೊಳ್ಳದ ಶಾರೂಕ್‌ ಖಾನ್‌ ಈಗ ತಮ್ಮ ಮುಂದಿನ ಸಿನಿಮಾದ ಬಗ್ಗೆ ಘೋಷಣೆ ಮಾಡಿದ್ದಾರೆ. ‘ಶಾರೂಕ್‌ ನಿಮ್ಮ ಮುಂದಿನ ಸಿನಿಮಾ ಯಾವುದು?’ಎಂದು ಅವರ ಅಭಿಮಾನಿಗಳುಟ್ವಿಟ್ಟರ್‌ನಲ್ಲಿ ಅಭಿಯಾನವನ್ನೇ ಮಾಡಿದ್ದರು.

ತಮಿಳಿನಲ್ಲಿ ‘ಮರ್ಸೆಲ್‌', ಹಾಗೂ ‘ಥೇರಿ’ ಸಿನಿಮಾಗಳನ್ನು ನಿರ್ದೇಶಿಸಿದ್ದ ಅಟ್ಲೀ ಅವರ ಮುಂದಿನ ಚಿತ್ರದಲ್ಲಿ ನಟ ಶಾರೂಕ್‌ ಖಾನ್‌ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

ಈ ಚಿತ್ರಕ್ಕೆ ಶಾರೂಕ್‌ ಖಾನ್‌ ಪಡೆಯುತ್ತಿರುವ ಸಂಭಾವನೆ ₹30 ಕೋಟಿ ಎಂಬ ಸುದ್ದಿ ಕೇಳಿಬರುತ್ತಿದೆ. ದಕ್ಷಿಣ ಭಾರತದ ನಿರ್ದೇಶಕರಿಗೆ ಇದು ದೊಡ್ಡ ಮೊತ್ತ. ಸಾಮಾನ್ಯವಾಗಿ ದಕ್ಷಿಣ ಭಾರತದ ಸ್ಟಾರ್‌ ನಟರು ಒಂದು ಸಿನಿಮಾಕ್ಕೆ ₹10 ಕೋಟಿ ತನಕ ಸಂಭಾವನೆ ಪಡೆಯುತ್ತಾರೆ.

ಈ ಚಿತ್ರವು ಒರಿಜಿನಲ್‌ ಸಿನಿಮಾ. ಇದು ಸಂಪೂರ್ಣ ಮಾಸ್‌ ಚಿತ್ರ ಎಂದು ಚಿತ್ರತಂಡ ಹೇಳಿಕೊಂಡಿದೆ.ಈ ಚಿತ್ರದ ಸ್ಕ್ರಿಫ್ಟ್‌ ಅನ್ನು ಕೆಲ ಸಮಯಗಳ ಹಿಂದೆ ಅಟ್ಲೀ ಸಿದ್ಧಪಡಿಸಿದ್ದರು. ‘ಅಟ್ಲೀ ಅವರ ಸಿನಿಮಾ ಪ್ರೀತಿ ಹಾಗೂ ಕತೆ ಶಾರೂಕ್‌ ಅವರಿಗೆ ಇಷ್ಟವಾಗಿದೆ. ಅವರು ಸದ್ಯದಲ್ಲೇ ಸಿನಿಮಾಕ್ಕೆ ಸಹಿ ಮಾಡಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT