ಮಂಗಳವಾರ, ಜನವರಿ 28, 2020
23 °C

‘ಜೆರ್ಸಿ’ ಹಿಂದಿ ರಿಮೇಕ್‌ನಲ್ಲಿ ಶಾಹಿದ್‌, ಶ್ರದ್ಧಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲುಗಿನ ‘ಜೆರ್ಸಿ’ ಸಿನಿಮಾ ಹಿಂದಿಗೆ ರಿಮೇಕ್‌ ಆಗುತ್ತಿದ್ದು, ಇದರಲ್ಲಿ ನಟ ಶಾಹಿದ್‌ ಕಪೂರ್‌ ಹಾಗೂ ಶ್ರದ್ಧಾ ಕಪೂರ್‌ ಜೋಡಿಯಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಕೇಳಿಬರುತ್ತಿದೆ. ಕಳೆದ ಕೆಲ ದಿನಗಳಿಂದಲೂ ಬಾಲಿವುಡ್‌ನಲ್ಲಿ ‘ಜೆರ್ಸಿ’ ರಿಮೇಕ್‌ ಸುದ್ದಿ ಹೆಚ್ಚಾಗಿ ಕೇಳಿಬರುತ್ತಿತ್ತು. ಈಗ ಈ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಈ ಸುದ್ದಿಯನ್ನು ಸ್ವತಃ ನಟ ಶಾಹಿದ್‌ ಕಪೂರ್‌ ದೃಢಪಡಿಸಿದ್ದಾರೆ.

ಶಾಹಿದ್‌ ಕಪೂರ್‌ ನಟಿಸಿದ ಕೊನೆಯ ಚಿತ್ರ ‘ಕಬೀರ್‌ ಸಿಂಗ್‌’ ಕೂಡ ವಿಜಯ್‌ ದೇವರಕೊಂಡ ಅಭಿನಯದ ತೆಲುಗಿನ ‘ಅರ್ಜುನ್‌ ರೆಡ್ಡಿ’ ರಿಮೇಕ್‌. ಹಿಂದಿಯಲ್ಲೂ ಕೂಡ ಈ ಚಿತ್ರ ಭಾರಿ ಹಿಟ್‌ ಆಗಿದೆ. ಇದು ಶಾಹಿದ್‌ ವೃತ್ತಿ ಬದುಕಿನ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವೂ ಹೌದು.

ಕಬೀರ್‌ ಸಿಂಗ್‌ ಬಳಿಕ ತೆಲುಗಿನ ಮತ್ತೊಂದು ಹಿಟ್‌ ಚಿತ್ರ ‘ಜೆರ್ಸಿ’ ಕೂಡ ಅದೇ ಹೆಸರಿನಲ್ಲಿ ಹಿಂದಿಗೆ ರಿಮೇಕ್‌ ಆಗುತ್ತಿದೆ. ಈಗ ಈ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಶಾಹಿದ್‌ ಕಪೂರ್‌ ಟ್ವಿಟ್ಟರ್‌ನಲ್ಲಿ ಈ ವಿಷಯ ತಿಳಿಸಿದ್ದಾರೆ. ಗೌತಮ್‌ ಟಿನ್ನನುರಿ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗು ಚಿತ್ರದಲ್ಲಿ ನಾನಿ ನಿರ್ವಹಿಸಿದ ‍ಪಾತ್ರವನ್ನು ಶಾಹಿದ್‌ ಮಾಡುತ್ತಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು