ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಪ್ರೀತಿಯ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಹೌದು, ಶಮಿತಾ ಅವರು ರಾಕೇಶ್ ಬಾಪಟ್ ಅವರೊಂದಿಗೆ ಪ್ರೀತಿಯಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ.

ಶಮಿತಾ ಮತ್ತು ರಾಕೇಶ್ ಪರಸ್ಪರ ಕೈ ಹಿಡಿದುಕೊಂಡಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರ ಜತೆಗೆ "ಯು ಅಂಡ್ ಐ" ಎಂದು ಬರೆದು ಹೃದಯದ ಇಮೋಜಿ ಹಾಕಿದ್ದಾರೆ. ಕೊನೆಯಲ್ಲಿ 'ಶರಾ' ಎಂದು ಬರೆದುಕೊಂಡಿದ್ದಾರೆ.

ಇಲ್ಲಿ'ಶ' ಎಂದರೆ ಶಮಿತಾ, ರಾ ಎಂದರೆ ರಾಕೇಶ್. ಈ 'ಶರಾ' ಜೋಡಿ ಅಭಿಮಾನಿಗಳ ಗಮನಸೆಳೆಯುತ್ತಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಶಮಿತಾ ಹಾಗೂ ರಾಕೇಶ್ ಒಟಿಟಿ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಗಳಾಗಿದ್ದರು. ಬಿಗ್‌ಬಾಸ್ ಮನೆಯಲ್ಲೆ ಇವರು ಪ್ರೀತಿಗೆ ಬಿದ್ದಿದ್ದರು. ಮನೆಯಲ್ಲಿ ತೀರ ಸಲುಗೆಯಿಂದ, ಆತ್ಮೀಯವಾಗಿ ಇರುತ್ತಿದ್ದರು. ಶಮಿತಾ ಮತ್ತು ರಾಕೇಶ್ ಮದುವೆಯಾಗುತ್ತಾರೆ ಎಂಬ ಸುದ್ದಿಗಳ ಹರಿದಾಡಿದ್ದವು.ಈ ಬಗ್ಗೆ ಇಬ್ಬರು ಯಾವುದೇ ಮಾಹಿತಿ ನೀಡಿರಲಿಲ್ಲ.

ಇದೀಗ ಪರಸ್ಪರ ಕೈ ಹಿಡಿದುಕೊಂಡಿರುವ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಪ್ರೀತಿಯ ವಿಷಯವನ್ನು ಬಹಿರಂಗಪಡಿಸಿದ್ದಾರೆ.

43 ವರ್ಷದ ರಾಕೇಶ್ ಹಾಗೂ 42ರ ಹರೆಯದ ಶಮಿತಾ ಶೆಟ್ಟಿ ಸದ್ಯ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.